ಬರಲಿದೆ “ಜಿಯೋ ಬುಕ್” ಲ್ಯಾಪ್ ಟಾಪ್ ..! ವಿಶೇಷತೆಗಳೇನು..?

 

ರಿಲಯನ್ಸ್ ಜಿಯೋ “ಜಿಯೋ ಬುಕ್” ಎಂಬ ಕಡಿಮೆ ದರದ ಲ್ಯಾಪ್‌ ಟಾಪ್‌ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಯಾಗಿದೆ.

ಹೊಸ ಲ್ಯಾಪ್‌ ಟಾಪ್ ಜಿಯೋ ಓಎಸ್ ಎಂದು ಕರೆಯಲ್ಪಡುವ ಫೋರ್ಕ್ಡ್ ಆಂಡ್ರಾಯ್ಡ್ ಬಿಲ್ಡ್ ಅನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಇದು ಫರ್ಮ್‌ ವೇರ್ ಜಿಯೋ ಅಪ್ಲಿಕೇಶನ್‌ ಗಳೊಂದಿಗೆ ಬರಬಹುದು. ಜಿಯೋ ಬುಕ್‌ ಗೆ 4 ಜಿ ಎಲ್‌ ಟಿ ಇ ಬೆಂಬಲವಿದೆ ಎಂದು ಹೇಳಲಾಗಿದೆ.

ಓದಿ : 7,500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಅರ್ಪಿಸಿದ ಪ್ರಧಾನಿ..!

ಮುಂಬೈ ಮೂಲದ ಟೆಲಿಕಾಂ ಆಪರೇಟರ್ ಈಗಾಗಲೇ ಮನೆ ಮನೆಯಲ್ಲು ಹೆಸರುವಾಸಿಯಾಗಿದ್ದು, ಮೊಬೈಲ್ ಫೋನ್ ಬಳಕೆದಾರರನ್ನು ಮೀರಿ ಮತ್ತು ಬಜೆಟ್ ಫ್ರೆಂಡ್ಲಿ ಕಂಪ್ಯೂಟಿಂಗ್  ಡಿವೈಸಸ್ ಹುಡುಕುತ್ತಿರುವ ಪ್ರೇಕ್ಷಕರನ್ನು ತಲುಪಲು ಲ್ಯಾಪ್‌ ಟಾಪ್ ಜಿಯೋನಾ ಇನ್ನೊಂದು ಆಯಾಮ ತನ್ನ ವಿಸ್ತಾರದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಒಂದು ವರ್ಷದಲ್ಲಿ ಲಾಪ್ ಟಾಪ್. ಕಂಪ್ಯೂಟರ್  ವಿಶೇಷವಾಗಿ ಮಹತ್ವದ್ದಾಗಿದೆ.

ಜಿಯೋ ಬುಕ್ ನಿರ್ಮಿಸಲು ಜಿಯೋ ಚೀನಾದ ಉತ್ಪಾದಕ ಬ್ಲೂಬ್ಯಾಂಕ್ ಸಂವಹನ ತಂತ್ರಜ್ಞಾನದೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಎಕ್ಸ್‌ ಡಿ ಎ ಡೆವಲಪರ್ಸ್ ವರದಿ ಮಾಡಿದ್ದಾರೆ. ಕಂಪನಿಯು ಈಗಾಗಲೇ ತನ್ನ ಉತ್ಪಾದನಾ ಘಟಕ್ಲದಲಿ ಜಿಯೋ ಫೋನ್ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಕಳೆದ ವರ್ಷದ ಸೆಪ್ಟೆಂಬರ್ ಆರಂಭದಲ್ಲಿ ಜಿಯೋ ಬುಕ್‌ ನ ಅಭಿವೃದ್ಧಿ ಪ್ರಾರಂಭವಾಯಿತು ಮತ್ತು 2021 ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬರುತ್ತದೆ ಎಂದು ಕಂಪೆನಿಯ ಆಂತರಿಕ ಮೂಲಗಳು ನೀಡಿರುವ ಮಾಹಿತಿಯನ್ನು  ಎಕ್ಸ್‌ ಡಿ ಎ ಡೆವಲಪರ್ಸ್ ವರದಿ ಮಾಡಿದೆ.

ಜಿಯೋ ಬುಕ್ ವಿಶೇಷತೆಗಳೇನು ..?

ಜಿಯೋ ಬುಕ್‌ ನ ಪ್ರಸ್ತುತ ಮೂಲ ಮಾದರಿಯು 1,366×768 ಪಿಕ್ಸೆಲ್‌ ಗಳ ರೆಸಲ್ಯೂಶನ್ ಮತ್ತು ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 665 SoC ಯೊಂದಿಗೆ ಡಿಸ್ಪ್ಲೆ ಹೊಂದಿದೆ ಮತ್ತು ಸ್ನಾಪ್‌ ಡ್ರಾಗನ್ ಎಕ್ಸ್ 12 4 ಜಿ ಮೋಡೆಮ್ ಅನ್ನು ಹೊಂದಿದೆ ಎಂದು ಎಕ್ಸ್‌ ಡಿ ಎ ಡೆವಲಪರ್ಸ್ ವರದಿ ಮಾಡಿದೆ. ಲ್ಯಾಪ್ ಟ್ ಅನ್ನು ಅನೇಕ ಪುನರಾವರ್ತನೆಗಳಲ್ಲಿ ಪರೀಕ್ಷಿಸಲಾಗಿದೆ ಮತ್ತು ಅದರ ಮಾದರಿಗಳಲ್ಲಿ 2 ಜಿಬಿ ಎಲ್ ಪಿ ಡಿ ಡಿ ಆರ್ 4 ಎಕ್ಸ್ ರ್ಯಾಮ್ ಮತ್ತು 32 ಜಿಬಿ ಇ ಎಂ ಎಂ ಸಿ ಸ್ಟೋರೇಜ್ ಹೋಂದಿದೆ. ಮತ್ತೊಂದು ಮಾದರಿಯಲ್ಲಿ 4 ಜಿಬಿ ಎಲ್‌ ಪಿ ಡಿ ಡಿ ಆರ್ 4 ಎಕ್ಸ್ ರ್ಯಾಮ್ ಮತ್ತು 64 ಜಿಬಿ ಇಎಂಎಂಸಿ 5.1 ಸ್ಟಓರೇಜನ್ನು ಹೊಂದಿದೆ.

ಓದಿ : ಕೇಂದ್ರ ಸರ್ಕಾರದ ಈ ನಿರ್ಧಾರ ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ: ಕುಮಾರಸ್ವಾಮಿ ಕಳವಳ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More