ಬರೋಬ್ಬರಿ ₹15 ಕೋಟಿಗೆ ಮಾರಾಟವಾದ ಇಶಾನ್​ ಕಿಶನ್​ -ಯಾವ ತಂಡಕ್ಕೆ..?


ಸಿಲಿಕಾನ್​ ಸಿಟಿಯಲ್ಲಿ 15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೊದಲ ದಿನದ ಮೆಗಾ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಆಕ್ಷನ್​ನಲ್ಲಿ ದೇಶ ವಿದೇಶಗಳ ಹಲವಾರು ಖ್ಯಾತ ಪ್ಲೇಯರ್​ಗಳು ಭಾಗವಹಿಸಿದ್ದು, ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಮುಂದಾಗಿದ್ದಾರೆ. ಅಂತೆಯೇ ಯುವ ಆಟಗಾರ ಇಶಾನ್​ ಕಿಶನ್​ಗೆ ಭರ್ಜರಿ ಜಾಕ್​ಪಾಟ್​ ಹೊಡೆದಿದೆ.

ಈ ಬಾರಿಯ ಆಕ್ಷನ್​ನಲ್ಲಿ ಇಶಾನ್​ ಕಿಶನ್​ ಇದುವರೆಗೆ ನಡೆದ  ಬಿಡ್​ಗಳಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರನಾಗಿದ್ದಾರೆ. ಇಶಾನ್​ರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 15.25 ಕೋಟಿ ಹಣವನ್ನ ನೀಡಿ ಮರು ಖರೀದಿಸಿದ್ದಾರೆ. ಈ ಮೊದಲು ಶ್ರೇಯಸ್ ಅಯ್ಯರ್​ ಇಂದಿನ ಹರಾಜಿನಲ್ಲಿ ಕೆಕೆಆರ್​ ಗೆ 12.25 ಕೋಟಿ ರೂಪಾಯಿಗೆ ಸೇಲ್​ ಆಗಿ ಅತೀಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡಿದ್ದರು.

News First Live Kannada


Leave a Reply

Your email address will not be published.