ಬರೋಬ್ಬರಿ 175 ರನ್​​ ಬಾರಿಸಿದ್ದ ಜಡೇಜಾ.. ರೋಹಿತ್​​ ಡಿಕ್ಲೇರ್​​​ ಘೋಷಿಸಿದ್ದ ಬಗ್ಗೆ ಹೇಳಿದ್ದೇನು?


ಶ್ರೀಲಂಕಾ ವಿರುದ್ದದ ಪಂದ್ಯದ ಮೊದಲ ಪಂದ್ಯದಲ್ಲಿ ಸ್ಟಾರ್​​ ಆಲ್​​​ರೌಂಡರ್​​ ರವೀಂದ್ರ ಜಡೇಜಾ ಅಜೇಯ 175 ರನ್ ಬಾರಿಸಿ ಅಬ್ಬರಿಸಿದರು. ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಾ 170 ರನ್​​​ ಬಾರಿಸಿದ್ದೇ ತಡ ಇನ್ನೇನು ಡಬಲ್​ ಸೆಂಚೂರಿ ಪಕ್ಕಾ ಆಗಿತ್ತು. ಆದರೆ, ರವೀಂದ್ರ ಜಡೇಜಾ 175 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು. ಇದು ಜಡೇಜಾ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಿತ್ತು.

ಈಗ ಈ ಬಗ್ಗೆ ಮಾತಾಡಿದ ರವೀಂದ್ರ ಜಡೇಜಾ ಡಿಕ್ಲೇರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು ನಾನೇ ಎಂದಿದ್ದಾರೆ. ನಾನು ಬ್ಯಾಟಿಂಗ್​​ ಮಾಡುವಾಗ ಚೆಂಡು ಬೌನ್ಸ್​ ಆಗುತ್ತಿತ್ತು. ಶ್ರೀಲಂಕಾ ಆಟಗಾರರು ಸುಸ್ತಾಗಿದ್ದರು. ಹೀಗಾಗಿ ಡಿಕ್ಲೇರ್ ತೆಗೆದುಕೊಳ್ಳಲು ಸರಿಯಾದ ಸಮಯ ಎಂದು ನಾನೇ ಹೇಳಿದೆ ಎಂದರು.

ಈ ಮುನ್ನ ಡಿಕ್ಲೇರ್​​ ನೀಡಿದ್ದ ಕ್ಯಾಪ್ಟನ್​​ ರೋಹಿತ್​ ಶರ್ಮಾ ಮತ್ತು ಕೋಚ್​ ದ್ರಾವಿಡ್​​​​ ವಿರುದ್ಧ ಜಡೇಜಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಷಿಯಲ್​​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​​ ಮಾಡಿದ್ದರು.

News First Live Kannada


Leave a Reply

Your email address will not be published. Required fields are marked *