ಯಶ್ ಧುಲ್ ಭಾರತ ಅಂಡರ್-19 ಕ್ರಿಕೆಟ್ ತಂಡದ ನಾಯಕ. ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಆಗಿ ಮಾಡಿದವರು. 19 ವರ್ಷದ ಭಾರತೀಯ ಬ್ಯಾಟ್ಸ್‌ಮನ್ ಈಗ ತನ್ನ ಮೂರನೇ ರಣಜಿ ಟ್ರೋಫಿ ಪಂದ್ಯದಲ್ಲಿ ಡಬಲ್ ಸೆಂಚೂರಿ ಬಾರಿಸಿದ್ದಾರೆ. ಈ ಮೂಲಕ ತನ್ನ ಅದ್ಭುತ ಆಟ ಪ್ರದರ್ಶಿಸಿದ್ದಾರೆ.
ಛತ್ತೀಸ್‌ಗಢ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಯಶ್ ಧುಲ್ ಕೇವಲ 261 ಎಸೆತಗಳಲ್ಲಿ 26 ಬೌಂಡರಿಗಳ ನೆರವಿನಿಂದ ಅಜೇಯ 200 ರನ್ ಗಳಿಸಿದರು. ಡೆಲ್ಲಿ ಪರ ಉತ್ತಮ ಆಟ ಪ್ರದರ್ಶಿಸಿದ ಯಶ್ ಭಾರತದ ಭವಿಷ್ಯದ ಸ್ಟಾರ್ ಆಟಗಾರ ಎಂಬ ಸುಳಿವು ನೀಡಿದರು.
ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿತು. ಜತೆಗೆ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಯಶ್ ಧುಲ್ ಡೆಲ್ಲಿ ಪರ ತನ್ನ ಮೊದಲ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಅಷ್ಟೇ ಅಲ್ಲ ಧುಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ 113 ರನ್ ಗಳಿಸಿದರು. ಎರಡನೇ ಪಂದ್ಯ ಉತ್ತಮವಾಗಿರಲಿಲ್ಲ. ಆದರೆ, ಕೊನೇ ಅಂದರೆ 3ನೇ ಪಂದ್ಯದಲ್ಲಿ ಯಶ್ ಧುಲ್ ಔಟಾಗದೆ 200 ರನ್ ಗಳಿಸಿದರು.
The post ಬರೋಬ್ಬರಿ 20 ಬೌಂಡರಿ.. ಬ್ಯಾಕ್ ಟು ಬ್ಯಾಕ್ ಫೋರ್.. ಯಶ್ ಧುಲ್ 200 ರನ್ ಬಾರಿಸಿದ್ದು ಹೀಗೆ..! appeared first on News First Kannada.