ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ? | Mohammed siraj ipl 2022 performance rohit sharma indian cricket team

Mohammad Siraj: ರೋಹಿತ್ ಶರ್ಮಾ ಅವರನ್ನು ಹೊಗಳಿದ ಸಿರಾಜ್, ‘ರೋಹಿತ್ ಶರ್ಮಾ ಯಾವುದೇ ಆಟಗಾರನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಬೌಲರ್ ತೊಂದರೆಗೆ ಒಳಗಾದಾಗಲೆಲ್ಲ, ಅವರು ಪ್ಲಾನ್ ಬಿ ಯೊಂದಿಗೆ ಬೌಲರ್ ಅನ್ನು ಪ್ರೋತ್ಸಾಹಿಸುತ್ತಾರೆ. ಹಾಗಾಗಿ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ನಾಯಕನೊಂದಿಗೆ ಆಡುವುದು ಒಳ್ಳೆಯದು ಎಂದಿದ್ದಾರೆ.

Jun 03, 2022 | 3:35 PM

TV9kannada Web Team

| Edited By: pruthvi Shankar

Jun 03, 2022 | 3:35 PM
ಐಪಿಎಲ್ 2022 ರಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಬೌಲರ್‌ನ ಲೈನ್-ಲೆಂತ್ ತುಂಬಾ ಕೆಟ್ಟದಾಗಿತ್ತು. ಸಿರಾಜ್ 15 ಪಂದ್ಯಗಳನ್ನು ಆಡಿದ್ದರೂ ಅವರ ಖಾತೆಗೆ ಬಂದಿದ್ದು ಕೇವಲ 9 ವಿಕೆಟ್. ಅಷ್ಟೇ ಅಲ್ಲ, ಅವರ ಎಕಾನಮಿ ದರವೂ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಆದರೆ, ಇದೀಗ ಮೊಹಮ್ಮದ್ ಸಿರಾಜ್ ಬಲಿಷ್ಠ ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ.

ಮೊಹಮ್ಮದ್ ಸಿರಾಜ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ, ಆದರೆ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಭಾಗವಾಗಿರಬಹುದು. ಸದೃಢ ಪುನರಾಗಮನ ಬಯಸುವುದಾಗಿ ಸಿರಾಜ್ ಹೇಳಿದ್ದಾರೆ. ಇದರೊಂದಿಗೆ ಹೊಸ ನಾಯಕ ರೋಹಿತ್ ಶರ್ಮಾ ಬಗ್ಗೆಯೂ ಸಿರಾಜ್ ದೊಡ್ಡ ಮಾತು ಹೇಳಿದ್ದಾರೆ.

ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ?

ರೋಹಿತ್ ಶರ್ಮಾ ಅವರನ್ನು ಹೊಗಳಿದ ಸಿರಾಜ್, ‘ರೋಹಿತ್ ಶರ್ಮಾ ಯಾವುದೇ ಆಟಗಾರನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಬೌಲರ್ ತೊಂದರೆಗೆ ಒಳಗಾದಾಗಲೆಲ್ಲ, ಅವರು ಪ್ಲಾನ್ ಬಿ ಯೊಂದಿಗೆ ಬೌಲರ್ ಅನ್ನು ಪ್ರೋತ್ಸಾಹಿಸುತ್ತಾರೆ. ಹಾಗಾಗಿ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ನಾಯಕನೊಂದಿಗೆ ಆಡುವುದು ಒಳ್ಳೆಯದು ಎಂದಿದ್ದಾರೆ.

ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ?

ಮೊಹಮ್ಮದ್ ಸಿರಾಜ್‌ಗೆ ಸಾಕಷ್ಟು ಧೈರ್ಯ ಬೇಕು. ಏಕೆಂದರೆ ಆರ್‌ಸಿಬಿ ಈ ಆಟಗಾರನ ಮೇಲೆ 7 ಕೋಟಿ ರೂ. ಸುರಿದಿತ್ತು. ಜೊತೆಗೆ ಸಿರಾಜ್ ಅವರನ್ನು ತಂಡ ಹರಾಜಿಗೂ ಮೊದಲೆ ಉಳಿಸಿಕೊಂಡಿತ್ತು. ಆದರೆ ಅವರು IPL 2022 ರಲ್ಲಿ ತುಂಬಾ ದುಬಾರಿ ಎಂದು ಸಾಬೀತಾಯಿತು. ಈ ಆಟಗಾರ ಗರಿಷ್ಠ 31 ಸಿಕ್ಸರ್‌ಗಳನ್ನು ತಿಂದಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಬೌಲರ್ ಇಷ್ಟೊಂದು ಸಿಕ್ಸರ್ ಹೊಡೆಸಿಕೊಂಡಿದ್ದು ಇದೇ ಮೊದಲು.

ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ?

ಆಟಗಾರನ ಜೀವನದಲ್ಲಿ ಯಾವುದೇ ಏರಿಳಿತಗಳಿಲ್ಲದಿದ್ದರೆ ಜೀವನವು ನಿಷ್ಪ್ರಯೋಜಕವಾಗಿದೆ ಎಂದು ಸಿರಾಜ್ ಐಪಿಎಲ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಹೇಳಿದರು. ಸಿರಾಜ್ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಆದರೆ ಈ ಬಾರಿ ಅವರ ಪ್ರದರ್ಶನ ತೀವ್ರವಾಗಿ ಕುಸಿಯಿತು.

Most Read Stories

TV9 Kannada

Leave a Reply

Your email address will not be published. Required fields are marked *