ಬರೋಬ್ಬರಿ 737 ಕೆಜಿ ಭಾರ ಎತ್ತಿ ದಾಖಲೆ ನಿರ್ಮಿಸಿದ ಮಹಿಳಾ ಪವರ್‌​ಲಿಫ್ಟರ್! ವಿಡಿಯೋ ನೋಡಿ | Tamara Walcott Lifts 737 kg world record video breaks Guinness World Record in weightlifting


ಅಮೆರಿಕದ ಪವರ್ ಲಿಫ್ಟರ್ ತಮಾರಾ ವೆಲ್ಕಾಟ್ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಮೇರಿಲ್ಯಾಂಡ್​ನ ಈ ಅಥ್ಲೀಟ್ 737.5 ಕೆಜಿ ಭಾರ ಎತ್ತುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಅಮೆರಿಕದ ಪವರ್ ಲಿಫ್ಟರ್ ತಮಾರಾ ವೆಲ್ಕಾಟ್ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಮೇರಿಲ್ಯಾಂಡ್​ನ ಈ ಅಥ್ಲೀಟ್ 737.5 ಕೆಜಿ ಭಾರ ಎತ್ತುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ವಾಲ್ಕಾಟ್ ಮೊದಲ ಬಾರಿಗೆ ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್ ಸಂಯೋಜನೆಯಲ್ಲಿ ದಾಖಲೆಯ ಭಾರವನ್ನು ಎತ್ತಿದ್ದಾರೆ. ಹೀಗಾಗಿ ಈ ವರ್ಷ ವರ್ಲ್ಡ್ ರಾ ಪವರ್‌ಲಿಫ್ಟಿಂಗ್ ಫೆಡರೇಶನ್ ಅಮೇರಿಕನ್ ಪ್ರೊನಿಂದ ತಮಾರಾ ವಾಲ್ಕಾಟ್ ಅವರನ್ನು ಗೌರವಿಸಿದೆ.

ಆಹಾರದ ವ್ಯಸನಿಯಾಗಿದ್ದ ತಮಾರಾ ವೆಲ್ಕಾಟ್
ತಮಾರಾಗೆ ವಿಶ್ವ ದಾಖಲೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ತಮಾರಾ ವೆಲ್ಕಾಟ್ ತಿನ್ನು ಬಾಕುತನ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಸ್ಥೂಲಕಾಯತೆಗೆ ತುತ್ತಾಗಿದ್ದಾರೆ. ಆದರೆ ಈಗ ಪವರ್‌ಲಿಫ್ಟಿಂಗ್​ನಲ್ಲಿ ವಿಶ್ವವೇ ಬೆರಗಾಗುವ ದಾಖಲೆ ಮಾಡಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ವಾಲ್ಕಾಟ್, ನಾನು ನನ್ನ ಮಕ್ಕಳ ಕಣ್ಣುಗಳನ್ನು ನೋಡಿದಾಗ ನನ್ನ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ವಾಲ್ಕಾಟ್‌ಗೆ ಇಬ್ಬರು ಮಕ್ಕಳಿದ್ದು, ಅವರೂ ಕೂಡ 188.2 ಕೆಜಿ ತೂಕವಿದ್ದಾರೆ.

5 ವರ್ಷಗಳ ಹಿಂದೆ ಪವರ್ ಲಿಫ್ಟಿಂಗ್ ಆರಂಭ

ವಾಲ್ಕಾಟ್ 2017 ರಲ್ಲಿ ಪವರ್‌ಲಿಫ್ಟಿಂಗ್ ಪ್ರಾರಂಭಿಸಿದರು. ಮೊದಲು ಅವರು ಬಾಸ್ಕೆಟ್‌ಬಾಲ್ ಆಡುತ್ತಿದ್ದರು. ವಾಲ್ಕಾಟ್ ಅವರ ವೀಡಿಯೊವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಪವರ್‌ಲಿಫ್ಟಿಂಗ್ ಪ್ರಾರಂಭಿಸಿದ ಒಂದು ವರ್ಷದಲ್ಲಿ ತಮಾರಾ 100 ಪೌಂಡ್‌ಗಳಷ್ಟು ತೂಕ ಕಡಿಮೆಯಾಗಿದ್ದರು. ಸ್ವತಃ ಈ ವಿಚಾರವನ್ನು ತಮಾರಾ ಸಂದರ್ಶನವೊಂದರಲ್ಲಿ, ನಾನು ತುಂಬಾ ನಡೆಯುತ್ತಿದ್ದೆ ಆದರೆ ಅದು ನನಗೆ ದೊಡ್ಡ ಕೆಲಸವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ತಮಾರಾ ವೆಲ್ಕಾಟ್ ಈ ದಾಖಲೆಯ ಮೂಲಕ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯಾಗಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಪುರುಷನ ಬಗ್ಗೆ ಮಾತನಾಡುವುದಾದರೆ, ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂಬ ಬಿರುದನ್ನು ಸ್ಕಾಟ್ಲೆಂಡ್‌ನ ಟಾಮ್ ಸ್ಟಾಲ್ಟ್‌ಮನ್ ಪಡೆದುಕೊಂಡಿದ್ದಾರೆ. ಸ್ಟಾಲ್ಟ್‌ಮನ್‌ಗೆ 28 ​​ವರ್ಷ ವಯಸ್ಸಾಗಿದ್ದು, ಅವರ ತೂಕ ಬರೋಬ್ಬರಿ 180 ಕೆಜಿ ಇದ್ದಾರೆ. ಜೊತೆಗೆ ಸ್ಟಾಲ್ಟ್‌ಮನ್‌ನ ಎತ್ತರ 6 ಅಡಿ 8 ಇಂಚು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *