ಮೊನ್ನೆ ತಾನೆ ತಮ್ಮ ಬಹು ಕಾಲದ ಗೆಳೆಯನ ಜೊತೆ ಎಂಗೇಜ್ಮೆಂಟ್ ಮಾಡಿಕೊಡು ಸುದ್ದಿಯಾಗಿದ್ದ ಸ್ಯಾಂಡಲ್ವುಡ್ ಕ್ಯೂಟ್ ಆ್ಯಂಡ್ ಬ್ಯುಸಿ ನಟಿ ಅದಿತಿ ಪ್ರಭುದೇವ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಜನವರಿ -13 -1994 ರಂದು ಜನಿಸಿದ,ಸ್ಯಾಂಡಲ್ವುಡ್ನ ಶ್ಯಾನೆ ಟಾಪಾಗೌಳೆ ಬೆಡಗಿಗೆ, 28 ರ ಸಂಭ್ರಮ.
‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅದಿತಿ, ಸದ್ಯ ಸ್ಯಾಂಡಲ್ವುಡ್ನ ಬ್ಯುಸಿಎಸ್ಟ್ ನಟಿ. 2017 ರಲ್ಲಿ ಬಿಡುಗಡೆಯಾದ,ಅಜೇಯ್ ರಾವ್ ನಟನೆಯ ‘ಧೈರ್ಯಂ’ ಸಿನಿಮಾದ ಮೂಲಕ ದೊಡ್ಡ ಪರದೆಗೆ ಎಂಟ್ರಿ ಕೊಟ್ಟು, ಇಂದು ಸಖತ್ ಆಗಿ ಮಿಂಚುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ಅದಿತಿ ಪ್ರಭುದೇವಾ ಅವರ ಸಿನಿಮಾ ಬಜಾರ್ ಅನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಕಡಿಮೆ ಅವಧಿಯಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧೈರ್ಯಂ, ಬಜಾರ್, ಆಪರೇಶನ್ ನಕ್ಷತ್ರ, ಸಿಂಗ, ರಂಗನಾಯಕಿ, ಬ್ರಹ್ಮಾಚಾರಿ, ಆನಾ, ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆಯನ್ನು ಪ್ರೂ ಮಾಡಿದ್ದಾರೆ.