ಗಾಂಧಿನಗರ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಇಂದು ಗುಜರಾತ್​​ನ ಅಹಮದಾಬಾದ್​ಗೆ ಭೇಟಿ ನೀಡುತ್ತಿದ್ದು, 2022ರ ವಿಧಾನಸಭಾ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಒಂದು ದಿನದ ಪ್ರವಾಸವನ್ನು ಕೇಜ್ರಿವಾಲ್​ ಕೈಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಾರ್ಟಿ ಗಮನಾರ್ಹ ಸಾಧನೆಯನ್ನು ಮಾಡಿದೆ.

ತಮ್ಮ ಅಹಮದಾಬಾದ್​ ಭೇಟಿಗೂ ಮುನ್ನ ಟ್ವಿಟ್​ ಮಾಡಿರುವ ಕೇಜ್ರಿವಾಲ್​​, ಈಗ ಗುಜರಾತ್ ಕೂಡ ಬದಲಾಗುತ್ತದೆ. ನಾನು ಗುಜರಾತ್​​ಗೆ ಬರುತ್ತಿದದೇನೆ. ಗುಜರಾತ್​​ನ ಸಹೋದರ ಸಹೋದರಿಯರನ್ನು ಭೇಟಿ ಮಾಡುತ್ತೇನೆ ಎಂದು ಕೇಜ್ರಿವಾಲ್​ ಬರೆದುಕೊಂಡಿದ್ದಾರೆ.

ಗುಜರಾತ್​​ಗೆ ಕೇಜ್ರಿವಾಲ್​ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದು, ಸೂರತ್​ ಮುನಿಸಿಪಾಲ್​ ಕಾಪೊರೇಷನ್​ ಚುನಾವಣೆಯಲ್ಲಿ 120 ಸ್ಥಾನಗಳಲ್ಲಿ 27 ಸ್ಥಾನಗಳಲ್ಲಿ ಗೆದ್ದು ಕೊಂಡಿತ್ತು. ಆ ಮೂಲಕ ಗುಜರಾತ್​​ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಪಕ್ಷಕ್ಕೆ ಭಾರೀ ಪೈಪೋಟಿ ನೀಡಿತ್ತು.

The post ‘ಬರ್ತಿದ್ದೀನಿ, ಗುಜರಾತ್​ ಕೂಡ ಬದಲಾಗುತ್ತೆ’- ಅಹಮದಾಬಾದ್ ಭೇಟಿಗೂ ಮುನ್ನ ಕೇಜ್ರಿವಾಲ್ ಎಚ್ಚರಿಕೆ appeared first on News First Kannada.

Source: newsfirstlive.com

Source link