ಬರ್ತ್​​​ಡೇ ಪಾರ್ಟಿಯಲ್ಲಿ ಸಿಂಹವನ್ನ ಬಳಸಿ ಶೋಕಿ; ಸೋಷಿಯಲ್ ಮೀಟಿ ಸ್ಟಾರ್ ವಿರುದ್ಧ ಖಂಡನೆ

ಬರ್ತ್​​​ಡೇ ಪಾರ್ಟಿಯಲ್ಲಿ ಸಿಂಹವನ್ನ ಬಳಸಿ ಶೋಕಿ; ಸೋಷಿಯಲ್ ಮೀಟಿ ಸ್ಟಾರ್ ವಿರುದ್ಧ ಖಂಡನೆ

ಸಿಂಹಗಳನ್ನ ಕಾಡಲ್ಲಿ, ಝೂನಲ್ಲಿ ಅಥವಾ ಟಿ.ವಿಯಲ್ಲಿ ನೋಡಿರ್ತೀರ. ಆದ್ರೆ ಯಾವತ್ತಾದ್ರೂ  ಪಾರ್ಟಿಯಲ್ಲಿ ಮೈ ಬಳುಕಿಸೋ ಯುವಕ ಯುವತಿಯರ ಮಧ್ಯೆ ಸಿಂಹವನ್ನ ಕಂಡಿದ್ದೀರ? ಈ ದೃಶ್ಯ ಕಂಡುಬಂದಿರೋದು ಪಾಕಿಸ್ತಾನದಲ್ಲಿ. ಕಾಡುಪ್ರಾಣಿಗಳನ್ನ ಅದ್ರಲ್ಲು ಹೆಚ್ಚಾಗಿ ಸಿಂಹಗಳನ್ನ, ಜನರು ತಮ್ಮ ಮನರಂಜನೆಗೋಸ್ಕರ ಪ್ರಾಪ್ ಆಗಿ ಬಳಸೋ ಟ್ರೆಂಡ್​​ ಪಾಕಿಸ್ತಾನದಲ್ಲಿ ಹೆಚ್ಚಾಗಿದೆ. ಇತ್ತೀಚೆಗೆ ಪಾಕ್​ನ ಫೇಮಸ್​ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಸೂಸನ್ ಖಾನ್ ಎಂಬಾಕೆ ತನ್ನ ಬರ್ತ್​​ಡೇ ಪಾರ್ಟಿಯಲ್ಲಿ, ಸಿಂಹವನ್ನ ಬಳಸಿಕೊಂಡಿದ್ದಾಳೆ. ಇದಕ್ಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

ಸಿಂಹಕ್ಕೆ ಅರವಳಿಕೆ ನೀಡಿ, ಅದನ್ನ ಕಬ್ಬಿಣದ ಸರಪಳಿಯಿಂದ ಬಂಧಿಸಲಾಗಿತ್ತು. ಸಿಂಹದ ಸುತ್ತಮುತ್ತ ಜನರು ಜೋರಾದ ಮ್ಯೂಸಿಕ್​​ಗೆ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು.

ಈ ಪಾರ್ಟಿಗೆ ಬಂದಿದ್ದ ಅತಿಥಿಯೊಬ್ಬರು ಸಿಂಹದ ವಿಡಿಯೋವನ್ನ ಸೈಯದ್​ ಹಸನ್ ಎಂಬವರಿಗೆ ಕಳಿಸಿದ್ರು. ಸೈಯದ್​, ಪ್ರಾಜೆಕ್ಟ್​ ಸೇವ್ ಅನಿಮಲ್ಸ್​ ಎಂಬ ಎನ್​ಜಿಓ ನಡೆಸುತ್ತಿದ್ದಾರೆ. ಅವರು ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಖಂಡನೆ ವ್ಯಕ್ತಪಡಿಸಿದ್ದು, ಜನರು ಕೂಡ ಸೂಸನ್​ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂಹದ ಕಾಲುಗಳನ್ನ ನೋಡಿದಾಗ ಮೊಂಡಾಗಿರುವುದನ್ನ ನೋಡಬಹುದು. ಅದರ ಅರ್ಥ ಸಿಂಹದ ಉಗುರಗಳನ್ನ ಹೊರತೆಗೆದಿದ್ದಾರೆ. ಪ್ರಾಣಿಗಳಿಗೆ ಅರವಳಿಕೆ ನೀಡಿ, ಚೈನ್​ನಿಂದ ಬಂಧಿಸಿ ಜನರು ಖುಷಿಪಡೋದನ್ನ ನೋಡಿದ್ರೆ ನನಗೆ ಬೇಸರವಾಗುತ್ತೆ ಅಂತ ಸೈಯದ್​ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಸೈಯದ್​ ಅವರ ವಿಡಿಯೋ ವೈರಲ್ ಆಗಿದ್ದು, ಪ್ರಾಣಿಗಳನ್ನ ಎಂಟರ್​​ಟೈನ್​ಮೆಂಟ್​ ಸಾಧನವಾಗಿ ಬಳಸುವ ಜನರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಕೂಗು ಕೇಳಿಬಂದಿದೆ.

ಅಂದ್ಹಾಗೆ ಪಾಕಿಸ್ತಾನದಲ್ಲಿ ಕಾಡುಪ್ರಾಣಿಗಳನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯವಾಗಿದೆ.  ಆದರೆ ಕೆಲವು ಪ್ರದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಇನ್ನು ಪಾಕಿಸ್ತಾನದ ಮತ್ತೊಬ್ಬ ನಟ ನಾಡಿಯಾ ಹುಸೇನ್, ಕಳೆದ ವಾರ ಸಿಂಹದೊಂದಿಗೆ ಫ್ಯಾಮಿಲಿ ಫೋಟೋವನ್ನು ತೆಗೆಸಿಕೊಂಡು ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಭಾರೀ ಟೀಕೆಗೆ ಗುರಿಯಾಗಿದ್ದರು.

The post ಬರ್ತ್​​​ಡೇ ಪಾರ್ಟಿಯಲ್ಲಿ ಸಿಂಹವನ್ನ ಬಳಸಿ ಶೋಕಿ; ಸೋಷಿಯಲ್ ಮೀಟಿ ಸ್ಟಾರ್ ವಿರುದ್ಧ ಖಂಡನೆ appeared first on News First Kannada.

Source: newsfirstlive.com

Source link