ಬರ್ತ್​​​​ಡೇ ಪಾರ್ಟಿ ತಂದ ಯಡವಟ್ಟು -ಅಪಾರ್ಟ್​​ಮೆಂಟ್​​ನಲ್ಲಿ ಕೊರೊನಾ ಸ್ಫೋಟ


ಬೆಂಗಳೂರು: ಹೆಮ್ಮಾರಿ ಕೊರೊನಾ ಅಟ್ಟಹಾಸಕ್ಕೆ ಇಡೀ ಜಗತ್ತೇ ಸಂಕಷ್ಟದಲ್ಲಿ ಮಿಂದೆದ್ದಿದೆ. ಅದೆಷ್ಟೋ ರಾಷ್ಟ್ರಗಳು ಈಗಷ್ಟೇ ಚೇತರಿಸಿಕೊಳ್ತಿವೆ. ಹೀಗಿರುವಾಗಲೇ ರೂಪ ಬದಲಿಸಿಕೊಂಡು ಮತ್ತೆ ಹೆಮ್ಮಾರಿ ಕರಾಳತೆಯನ್ನು ತೋರಲು ಆರಂಭಿಸಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿಗೂ ಆತಂಕ ಶುರುವಾಗಿದೆ. ಈ ನಡುವೆ ಬರ್ತ್​ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 10ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್​​​ ವರದಿ ಬಂದಿರುವ ಘಟನೆ ಕೋರಮಂಗಲದ ರಹೇಜ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ನಡೆದಿದೆ.

ಬಿಬಿಎಂಪಿ ಸದ್ಯ ಅಪಾರ್ಟ್ಮೆಂಟ್ ನ ಫ್ಲಾಟ್​​ ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಎಲ್ಲರ ಸ್ಯಾಂಪಲ್‌ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಿಕೊಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ಅಪಾರ್ಟ್ಮೆಂಟ್ ನ ಫ್ಲಾಟ್​​ನಲ್ಲಿ ಬರ್ತ್​​​ಡೇ ಪಾರ್ಟಿ ನಡೆಸಲಾಗಿತ್ತು. ಪಾರ್ಟಿಯಲ್ಲಿ 16ಕ್ಕೂ ಹೆಚ್ಚು ಮಂದಿ ಸೇರಿದ್ದರು. ಇದರಲ್ಲಿ 10 ಮಂದಿಯ ವರದಿ ಪಾಸಿಟವ್​ ಬಂದಿದೆ. ಸದ್ಯ ಅಪಾರ್ಟ್‌ಮೆಂಟ್ ಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬರ್ತ್ ಡೇ ಪಾರ್ಟಿ ಗೆ ಬಂದಿರುವ ಎಲ್ಲಾ ಜನರ ಸ್ವಾಬ್ ಅನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಅಪಾರ್ಟ್ಮೆಂಟ್ ನ ಫ್ಲಾಟ್ ಜೊತೆಗೆ ಬರ್ತ್​​​ಡೇ ಪಾರ್ಟಿಗೆ ಬಂದಿರುವ ಸಂಬಂಧಿಕರ ಮನೆಗಳನ್ನೂ ಕಂಟೈನ್ಮೆಂಟ್ ಜೋನ್ ಎಂದು ಗುರುತು ಮಾಡಿ, ಎಲ್ಲರ ಸ್ಯಾಂಪಲ್‌ ಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *