ಬಲವಂತದ ರಾಜೀನಾಮೆ ಪಡೆಯುತ್ತಿದೆ ಬೈಜೂಸ್; ಬೆಂಗಳೂರಿನಲ್ಲಿಯೂ ಉದ್ಯೋಗಿಗಳ ಆರೋಪ – Layoffs in Bengaluru Karnataka Being forced to resign claim BYJUs Bengaluru employees But Edtech Giant says false news


ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ವಜಾಗೊಳ್ಳಬೇಕಾಗುತ್ತದೆ ಎಂದು ಬೈಜೂಸ್ ಆಡಳಿತ ಮಂಡಳಿ ಹೇಳಿದೆ ಎಂದು ಬೆಂಗಳೂರಿನ ಉದ್ಯೋಗಿಗಳು ಆರೋಪಿಸಿರುವುದಾಗಿ ವರದಿಯಾಗಿದೆ.

ಬಲವಂತದ ರಾಜೀನಾಮೆ ಪಡೆಯುತ್ತಿದೆ ಬೈಜೂಸ್; ಬೆಂಗಳೂರಿನಲ್ಲಿಯೂ ಉದ್ಯೋಗಿಗಳ ಆರೋಪ

ಬೈಜೂಸ್

Image Credit source: Shutterstock

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಎನ್ನಲಾಗಿರುವ ಎಜುಟೆಕ್ ಕಂಪನಿ ಬೈಜೂಸ್ (BYJU’s) ಕೇರಳದಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದೀಗ ಬೆಂಗಳೂರಿನಲ್ಲಿಯೂ (Bengaluru) ಅಂಥದ್ದೇ ಆರೋಪ ಕೇಳಿಬಂದಿರುವ ಬಗ್ಗೆ ವರದಿಯಾಗಿದೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ವಜಾಗೊಳ್ಳಬೇಕಾಗುತ್ತದೆ ಎಂದು ಬೈಜೂಸ್ ಆಡಳಿತ ಮಂಡಳಿ ಹೇಳಿದೆ ಎಂದು ಬೆಂಗಳೂರಿನ ಉದ್ಯೋಗಿಗಳು ಆರೋಪಿಸಿದ್ದಾರೆ.

ಕಳೆದ 7ರಿಂದ 10 ದಿನಗಳಲ್ಲಿ ಬೈಜೂಸ್ ಆಡಳಿತ ಮಂಡಳಿ ವಿವಿಧ ಸೆಕ್ಷನ್​ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಉದ್ಯೋಗಿಗಳ ಜತೆ ಮಾತುಕತೆ ನಡೆಸಿದೆ. ಗುಣಮಟ್ಟ ವಿಶ್ಲೇಷಣಾ ತಂಡದ 475 ಮಂದಿ ಉದ್ಯೋಗಿಗಳ ಪೈಕಿ 300 ಮಂದಿಯ ರಾಜೀನಾಮೆ ಕೇಳಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ‘ಬ್ಯುಸಿನೆಸ್ ಲೈನ್’ ವರದಿ ಮಾಡಿದೆ. ಕಳೆದ ವಾರದಿಂದಲೇ ಬೈಜೂಸ್ ಈ ಪ್ರಕ್ರಿಯೆ ಆರಂಭಿಸಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಂದಲೂ ರಾಜೀನಾಮೆ ಕೇಳಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ನೇಮಕಾತಿ ತಂಡದಲ್ಲಿಯೂ ಇರುವ 400 ಮಂದಿಯ ಪೈಕಿ 300 ಮಂದಿಯ ರಾಜೀನಾಮೆ ಕೇಳಲಾಗಿದೆ ಎಂದು ಮೂಲಗಳು ಹೇಳಿವೆ.

ಉದ್ಯೋಗಿಗಳ ಸಂಘಕ್ಕೆ ದೂರು

ಬಲವಂತದ ರಾಜೀನಾಮೆಗೆ ಸಂಬಂಧಿಸಿ ಬೈಜೂಸ್ ಬೆಂಗಳೂರು ಘಟಕದ 10-12 ಉದ್ಯೋಗಿಗಳು ದೂರು ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್​ ಉದ್ಯೋಗಿಗಳ ಒಕ್ಕೂಟ ತಿಳಿಸಿದೆ. ನೂರಾರು ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಿರುವುದೂ ಗಮನಕ್ಕೆ ಬಂದಿದೆ. ಇಂಥ ಅಕ್ರಮವನ್ನು ಖಂಡಿಸುತ್ತೇವೆ ಎಂದೂ ಒಕ್ಕೂಟ ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ವರದಿ ನಿರಾಕರಿಸಿದ ಬೈಜೂಸ್

ಉದ್ಯೋಗಳಿಂದ ಬಲವಂತದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬ ಆರೋಪವನ್ನು ಬೈಜೂಸ್ ಆಡಳಿತಮಂಡಳಿ ನಿರಾಕರಿಸಿದೆ. ಈ ಕುರಿತು ಬೈಜೂಸ್ ವಕವ್ತಾರರು ಪ್ರತಿಕ್ರಿಯಿಸಿದ್ದು, ಬೆಂಗಳೂರು ಕಚೇರಿಯ ಉದ್ಯೋಗಿಗಳಿಂದ ಬಲವಂತದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬುದು ಸುಳ್ಳು. ಬೈಜೂಸ್ ಒಂದು ಜವಾಬ್ದಾರಿಯುತ ಸಂಸ್ಥೆ. ದೇಶದಾದ್ಯಂತ 50,000 ಉದ್ಯೋಗಿಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

TV9 Kannada


Leave a Reply

Your email address will not be published.