ಸಚಿನ್​-ಕಾಂಬ್ಳಿ, ಜಯವರ್ದನೆ – ಸಂಗಾಕ್ಕರ, ಎಬಿ ಡಿವಿಲಿಯರ್ಸ್​ -ಡೇಲ್​ ಸ್ಟೇನ್​, ದ್ರಾವಿಡ್​- ಲಕ್ಷ್ಮಣ್​ ಹೀಗೆ ಹಲವು ಕ್ರಿಕೆಟ್​​ ಲೋಕದ ಹಲವು ಗೆಳೆತನದ ಬಾಂದವ್ಯದ ಕುರುಹುಗಳು ನಮ್ಮ ಮುಂದಿವೆ. ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​ಎಸ್​ ಧೋನಿ, ಹಾಲಿ ನಾಯಕ ವಿರಾಟ್​​ ಕೊಹ್ಲಿಯದ್ದು ಇವರೆಲ್ಲರಿಗಿಂತ ವಿಶೇಷ ಕಥೆ. ಆರಂಭದಲ್ಲಿ ಗುರು-ಶಿಷ್ಯರಾಗಿದ್ದ ಈ ಜೋಡಿ ಇದೀಗ ಬೇರ್ಪಡಿಸಲಾಗದ ಗೆಳೆಯರಾಗಿದ್ದಾರೆ.

ಹಾಲಿ ನಾಯಕ ವಿರಾಟ್​ ಕೊಹ್ಲಿ ಮತ್ತು ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಇಬ್ಬರೂ ಕೂಡ ಟೀಮ್​ ಇಂಡಿಯಾ ಕಂಡ ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್ಸ್​..! ಹಾಗೆಯೇ ಬೆಸ್ಟ್​​ ಫ್ರೆಂಡ್ಸ್​ ಕೂಡ.! ಇದರಲ್ಲಿ ಯಾವುದೇ ಅನುಮಾನವಿಲ್ಲ..! ಅದರಲ್ಲೂ ವಿರಾಟ್​​ ಕೊಹ್ಲಿ ಪಾಲಿಗಂತೂ ಧೋನಿಯೇ ಎಲ್ಲಾ..! ಹಲವು ಕ್ರಿಕೆಟಿಗರೊಂದಿಗೆ ಒಡನಾಟ ಹೊಂದಿದ್ರೂ, ತಮ್ಮ ನೋವು-ನಲಿವುಗಳನ್ನು ವಿರಾಟ್​ ಹಂಚಿಕೊಳ್ಳೋದು ಮಾತ್ರ ಮಿಸ್ಟರ್​​ ಕೂಲ್​ ಧೋನಿ ಬಳಿ..!

ಧೋನಿಯನ್ನ 2 ಪದಗಳಲ್ಲೇ ಬಣ್ಣಿಸಿದ ವಿರಾಟ್​ ಕೊಹ್ಲಿ 

ಧೋನಿಯೊಂದಿಗೆ ವಿರಾಟ್​ ಬಾಂದ್ಯವ್ಯದ ಚರ್ಚೆ ಮುನ್ನೆಲೆಗೆ ಬರೋಕೆ ಕಾರಣವಾದ ಅಂಶವೇ ಇದು. ಇತ್ತೀಚೆಗೆ ಕೊಹ್ಲಿ ಇನ್​ಸ್ಟಾಗ್ರಾಮ್​​ನಲ್ಲಿ ನಡೆಸಿದ ಪ್ರಶ್ನೋತ್ತರ ಅವಧಿಯಲ್ಲಿ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಧೋನಿ ಅಭಿಮಾನಿಯೊಬ್ಬ, ನಿಮ್ಮ ಮತ್ತು ಧೋನಿ ನಡುವಿನ ಸಂಬಂಧ ಹೇಗಿದೆ ಅನ್ನೋದ್ರ ಬಗ್ಗೆ ಎರಡೇ ಪದಗಳಲ್ಲಿ ವಿವರಿಸಿ ಎಂದು ಕೇಳಿದ್ದಾರೆ. ಆತ ಕೇಳಿದಂತೆ ಟ್ರಸ್ಟ್​​ ಆ್ಯಂಡ್​ ರೆಸ್​ಪೆಕ್ಟ್​ ಅಂದರೆ ನಂಬಿಕೆ ಮತ್ತು ಗೌರವ ಎಂದು ಎರಡೇ ಪದಗಳಲ್ಲಿ ಉತ್ತರ ಕೊಟ್ಟಿದ್ದಾರೆ. ಇದನ್ನೇ ಕೊಹ್ಲಿ, ತನ್ನ ಇನ್​​ಸ್ಟಾಗ್ರಾಮ್​ ಸ್ಟೇಟಸ್​​ನಲ್ಲಿ ಹಾಕಿಕೊಂಡಿದ್ದು, ಸಖತ್​ ವೈರಲ್​ ಆಗ್ತಿದೆ.

ಎಲ್ಲರಿಗಿಂತ ಮಿಗಿಲಾದದ್ದು ಧೋನಿ-ಕೊಹ್ಲಿ ಸ್ನೇಹ 

ಧೋನಿಗೆ ಕೊಹ್ಲಿಯಷ್ಟೇ ಆಪ್ತ ಸುರೇಶ್​ ರೈನಾ..! ಹಾಗೆಯೇ ಕೊಹ್ಲಿಗೆ ಧೋನಿಯಷ್ಟೇ ಪರಮಾಪ್ತ ಎಬಿ ಡಿವಿಲಿಯರ್ಸ್​​​.! ಆದರೆ ಧೋನಿ-ಕೊಹ್ಲಿ ನಡುವಿನ ಸ್ನೇಹ ವಿಶೇಷವಾದದ್ದು. ಆನ್​ಪೀಲ್ಡ್​ನಲ್ಲಿ ಇವರಿಬ್ಬರ ನಡುವಿನ ಸ್ನೇಹ ಪರಸ್ಪರ ಗೌರವಕ್ಕೆ ಸಾಕ್ಷಿಯಾದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಆಫ್​ ದ ಫೀಲ್ಡ್​ನಲ್ಲೂ ಇವರಿಬ್ಬರದು ಅಷ್ಟೇ ಗಟ್ಟಿ ಭಾಂದವ್ಯ. ಇನ್​ಫ್ಯಾಕ್ಟ್​​ ಖಾಸಗಿ ಜೀವನದ ಪ್ರತಿಯೊಂದು ನಿರ್ಧಾರಕ್ಕೂ ಧೋನಿ ಸಲಹೆಯನ್ನ ವಿರಾಟ್​ ಪಡೀತಾರೆ ಅಂದ್ರೆ ನೀವು ನಂಬಲೇಬೇಕು. ಅದಕ್ಕೆ ವಿರಾಟ್​​ ಉತ್ತರವಿದ್ದಿದ್ದು ಟ್ರಸ್ಟ್​​ ಆ್ಯಂಡ್​ ರೆಸ್ಪೆಕ್ಟ್​ ಅಂತಾ..!

ಗುರುವಿನ ಕ್ರಿಕೆಟ್​ ವಿದಾಯಕ್ಕೆ ಭಾವುಕರಾಗಿದ್ದ ಶಿಷ್ಯ 

ಯೆಸ್​​..! ಅಂತಾರಾಷ್ಟ್ರೀಯ ಕ್ರಿಕೆಟ್​ ಧೋನಿ ವಿದಾಯ ಹೇಳಿದಾಗ, ಇಡೀ ಕ್ರಿಕೆಟ್​ ಲೋಕವೇ ಮೌನಕ್ಕೆ ಶರಣಾಗಿತ್ತು. ಅದರಲ್ಲೂ ಆನ್​ಫೀಲ್ಡ್​​ ಹಾಗೂ ಆಫ್​ ದ ಪೀಲ್ಡ್​ನಲ್ಲಿ ಧೋನಿಗೆ ಹೆಚ್ಚು ಹತ್ತಿರವಾಗಿದ್ದ ಕೊಹ್ಲಿ, ಮತ್ತಷ್ಟು ಭಾವುಕಕ್ಕೆ ಒಳಗಾಗಿದ್ದರು. ಮಾಹಿ ನಿವೃತ್ತಿ ಸಂದರ್ಭದಲ್ಲಿ ತಮ್ಮ ಭಾವನೆಯನ್ನ ಟ್ವಿಟ್ಟರ್‌ನಲ್ಲಿ ವ್ಯಕ್ತಪಡಿಸಿದ್ದ ಕೊಹ್ಲಿ, ಪ್ರತಿಯೊಬ್ಬ ಕ್ರಿಕೆಟರ್ ಜರ್ನಿ ಕೂಡ ಒಂದಲ್ಲ ಒಂದು ದಿನ ಅಂತ್ಯಕ್ಕೆ ಬಂದು ನಿಲ್ಲಲೇಬೇಕು..! ಆದರೆ, ಹೃದಯಕ್ಕೆ ತೀರಾ ಹತ್ತಿರವಾದವರ ನಿವೃತ್ತಿ ಸುದ್ದಿ, ಹೆಚ್ಚಿನ ನೋವನ್ನು ತರಿಸುತ್ತೆ. ಯಾವಾಗಲೂ ನೀನೇ ನನ್ನ ಕ್ಯಾಪ್ಟನ್​ ಎಂದು ಬರೆದುಕೊಂಡಿದ್ದರು.

ವಿರಾಟ್​​ ಕೊಹ್ಲಿ ಸಕ್ಸಸ್​​ಗೆ​ ಧೋನಿಯೇ ಕಾರಣ..!

ಧೋನಿ – ಕೊಹ್ಲಿ ಅಂದ್ರೆನೆ ಗುರು-ಶಿಷ್ಯರು..! ಕ್ರಿಕೆಟ್ ಲೋಕದಲ್ಲಿ ಮನ್ವಂತರವನ್ನೇ ಸೃಷ್ಟಿಸಿದೆ ಈ ಜೋಡಿ. ಸದ್ಯ ಧೋನಿಯನ್ನೇ ಬೀಟ್​ ಮಾಡಿ, ಸೆನ್​ಸೇಷನ್​ ಸೃಷ್ಟಿಸಿರುವ ಕೊಹ್ಲಿ, ಗುರುವನ್ನೇ ಮೀರಿಸಿದ ಶಿಷ್ಯ ಎನಿಸಿಕೊಂಡಿದ್ದಾರೆ. ಅದರ ಕ್ರೆಡಿಟ್​ ಎಲ್ಲವೂ ಧೋನಿಗೇ ಸಲ್ಲಬೇಕು..! ಕ್ರಿಕೆಟ್​ಗೆ ಎಂಟ್ರಿಕೊಟ್ಟಾಗಿನಿಂದ ಕೊಹ್ಲಿಯನ್ನ ಸದಾ ಪ್ರೋತ್ಸಾಹಿಸಿದ್ದ ಧೋನಿ, ತಪ್ಪು ಒಪ್ಪುಗಳನ್ನೂ ತಿದ್ದಿದ್ರು. ಸತತ ವೈಫಲ್ಯಗಳ ನಡುವೆಯೂ ಅವಕಾಶ ನೀಡಿ ನಾಯಕತ್ವಕ್ಕೆ ಗುಡ್​ ಬೈ ಹೇಳಿದ ಬಳಿಕ ಕೊಹ್ಲಿಯನ್ನ ಆ ಸ್ಥಾನಕ್ಕೆ ಸೂಚಿಸಿದ್ರು.

ಇಷ್ಟೇ ಅಲ್ಲ..! ಕೊಹ್ಲಿಗೆ ನಾಯಕನ ಪಟ್ಟ ಕಟ್ಟಿದ ಬಳಿಕ ನಾಯಕತ್ವದ ಪಟ್ಟುಗಳನ್ನ ಕಲಿಸಿದ್ದು ಮಿಸ್ಟರ್​ ಕೂಲ್​ ಧೋನಿಯೇ. ಸ್ಪಂಪ್​ ಹಿಂದೆ ನಿಂತು ವಿರಾಟ್​ ಕೊಹ್ಲಿಗೆ ಸದಾ ಸಲಹೆ-ಸೂಚನೆಗಳನ್ನ ನೀಡ್ತಾ ಇದ್ದ ಧೋನಿ, ಒಬ್ಬ ಮೆಚ್ಯೂರೂಡ್​ ಕ್ಯಾಪ್ಟನ್​ ರೂಪುಗಳ್ಳುವಂತೆ ಮಾಡುವಲ್ಲಿ ಯಶಸ್ಸಿಯಾದ್ರು. ಅಂದು ಮಾಹಿ ನೀಡಿದ ಸಲಹೆ ಸೂಚನೆಗಳೇ ಇಂದು ಕೊಹ್ಲಿಯನ್ನ ವಿಶ್ವದ ಬೆಸ್ಟ್​ ಕ್ಯಾಪ್ಟನ್​ ಅನ್ನೋ ಹಂತಕ್ಕೆ ತಂದು ನಿಲ್ಲಿಸಿದೆ.

ಆದ್ರೆ, ಈ ಹಂತದಲ್ಲೂ ಕೊಹ್ಲಿ ಮೈ ಮರೆತಿಲ್ಲ. ಎಲ್ಲಡೆಯೂ ನನಗೆ ಎಂದಿಗೂ ಧೋನಿಯೇ ನಾಯಕ ಎಂದು ಮಾಹಿಗೆ ಗೌರವವನ್ನ ಅರ್ಪಿಸುತ್ತಲೇ ಇದ್ದಾರೆ. ಹೀಗಾಗಿಯೇ ಗುರು-ಶಿಷ್ಯರ ಭಾಂದವ್ಯ ಇದೀಗ ಗೆಳೆತನವಾಗಿ ಮಾರ್ಪಟ್ಟಿರೋದು. ಇವರಿಬ್ಬರ ಅನ್ಯೋನ್ಯ ಸಂಬಂಧ ಮುಂದೆಯೂ ಹೀಗೆ ಇರಲಿ ಅನ್ನೋದೇ ಅಭಿಮಾನಿಗಳ ಆಶಯ.

The post ಬಲವಾದ ನಂಬಿಕೆ.. ಅಚಲ ಗೌರವ; ಧೋನಿ ಮತ್ತು ತಮ್ಮ ಸಂಬಂಧದ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ appeared first on News First Kannada.

Source: newsfirstlive.com

Source link