ಬಲಿಷ್ಠ ಭಾರತ ತಂಡವನ್ನು ಹಾಡಿ ಹೊಗಳಿದ ಪಾಕ್​ ಆಟಗಾರ


ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಗೆ ಟೀಂ ಮ್ಯಾನೇಜ್​ಮೆಂಟ್​ ಆಯ್ಕೆ ಮಾಡಿರುವ ತಂಡದ ಕುರಿತು ಪಾಕ್​ನ ಮಾಜಿ ವೀಕೆಟ್​ ಕೀಪರ್​ ಕಮ್ರಾನ್​ ಅಕ್ಮಲ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಯ್ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿದ ಅವರು ಟೀಂ ಮ್ಯಾನೇಜ್​ಮೆಂಟ್​ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಗೆ ಬಲಿಷ್ಠವಾದ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾರೆ. ಈ ತಂಡವು ಉತ್ತಮ ಯುವ ಆಟಗಾರರನ್ನು ಹೊಂದಿದ್ದು ಅತ್ಯಂತ ಗಟ್ಟಿತನದಿಂದ ಕೂಡಿದೆ. ಜೊತೆಗೆ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ಎದುರು ಕೂಡ ಉತ್ತಮ ಆಟವನ್ನು ಟೀಂ ಇಂಡಿಯಾದ ಆಟಗಾರರು ಪ್ರದರ್ಶಿಸಿದ್ದರು ಎಂದು ಕಮ್ರಾನ್​ ಕೊಂಡಾಡಿದ್ದಾರೆ.

ಮುಂದಿನ ತಿಂಗಳು ಸೌಥ್​ ಆಫ್ರಿಕಾ ಪ್ರವಾಸ ನಿಮಿತ್ತ ಸೆಲೆಕ್ಷನ್​ ಕಮೀಟಿ ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬುಮ್ರಾ, ರವೀಂದ್ರ ಜಡೇಜಾ ಅವರನ್ನು ವಿಶ್ರಾಂತಿಗಾಗಿ ಈ ಸೀರಿಸ್​ನಿಂದ ಕೈ ಬಿಡಲಾಗಿದೆ. ಇನ್ನು ನೂತನ ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ರೋಹಿತ್​ ಶರ್ಮಾ ಕೂಡ ಜವಾಬ್ದಾರಿಯುತ ಆಟದ ಜೊತೆ ನಾಯಕ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ ಎಂದು ಕಮ್ರಾನ್​ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *