ಬೆಂಗಳೂರು: ಹುಟ್ಟುಹಬ್ಬ ಆಚರಣೆ ಮಾಡಲು ಬಲೂನ್​​ಗೆ ಗ್ಯಾಸ್​ ಫಿಲ್​​ ಮಾಡಬೇಕಾದರೆ ಸ್ಫೋಟ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಅಶೋಕನಗರದ ಖಾಸಗಿ ಅಪಾರ್ಟ್​​ಮೆಂಟ್​ ಬಳಿ ನಡೆದಿದೆ.

ಪರಪ್ಪನ ಅಗ್ರಹಾರ ನಿವಾಸಿ ದಿನೇಶ್ ಮೃತಪಟ್ಟ ವ್ಯಕ್ತಿಯಾಗಿದ್ದು, ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಅಪಾರ್ಟ್​ಮೆಂಟ್​ ವ್ಯಕ್ತಿ ಹುಟ್ಟುಹಬ್ಬ ಆಚರಣೆ ಮಾಡಲು ಇಂಟರ್ ನೆಟ್ ಮುಖಾಂತರ ದಿನೇಶ್​​​ನನ್ನು ಸಂಪರ್ಕಿಸಿ ಬಲೂನ್ ಡೆಕೋರೇಷನ್ ಮಾಡಲು ಅಪಾರ್ಟ್​ಮೆಂಟ್ ಬಳಿ ಕರೆಯಿಸಿಕೊಂಡಿದ್ದಾರೆ.

ಅಪಾರ್ಟ್​ಮೆಂಟ್​ ಬಳಿ ಆ್ಯಕ್ಟೀವ್ ಹೊಂಡಾ ಬೈಕ್​ ಮೇಲೆ ರಿಚ್ಮಂಡ್ ಸರ್ಕಲ್ ಬಳಿ ದಿನೇಶ್​ ತನ್ನ ಸಹಾಯಕ ಮಹದೇಶ್ ನೊಂದಿಗೆ ಆಗಮಿಸಿದ್ದ. ಈ ವೇಳೆ ಬೈಕ್ ಮೇಲೆಯೇ ಸಿಲಿಂಡರ್​ ಇಟ್ಟು ಬಲೂನ್​​ಗೆ ಫಿಲ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.

The post ಬಲೂನ್​ಗೆ ಗ್ಯಾಸ್ ಫಿಲ್​​​ ಮಾಡೋ ವೇಳೆ ಸ್ಫೋಟ- ಸ್ಥಳದಲ್ಲೇ ವ್ಯಕ್ತಿ ಸಾವು appeared first on News First Kannada.

Source: newsfirstlive.com

Source link