ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ | Special Covid Guidelines released to Ballari Many people who participated in Mekedatu Padayatra tests Positive for Covid19


ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ

ಪ್ರಾತಿನಿಧಿಕ ಚಿತ್ರ

ಬಳ್ಳಾರಿ: ಜಿಲ್ಲೆಯಲ್ಲಿ ನೈಟ್​ ಕರ್ಫ್ಯೂ ಅವಧಿ ಬದಲಾಯಿಸಿ ಆದೇಶ ಹೊರಡಿಸಲಾಗಿದೆ. ಕೊರೊನಾ ಹೆಚ್ಚಳ ಹಿನ್ನೆಲೆ ಜನವರಿ 31ರ ವರೆಗೆ ಪ್ರತ್ಯೇಕ ಗೈಡ್​ಲೈನ್ಸ್ ಜಾರಿಗೊಳಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6ರ ವರೆಗೆ ನೈಟ್​ ಕರ್ಫ್ಯೂ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6 ರವರೆಗೆ ಎಲ್ಲವೂ ಬಂದ್ ಆಗಿರಲಿದೆ. ದೇವಸ್ಥಾನ, ಚರ್ಚ್, ಮಸೀದಿ ಎಲ್ಲವನ್ನೂ ಬಂದ್ ಮಾಡಬೇಕು. ಯಾವುದೇ ರೀತಿಯ ಪ್ರಾರ್ಥನೆ, ಪೂಜೆ ಮಾಡಲು ಅವಕಾಶವಿಲ್ಲ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಹೇಳಿಕೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 31ರ ವರೆಗೆ ಚಿತ್ರಮಂದಿರ ಕ್ಲೋಸ್ ಆಗಿರಲಿದೆ. ರಂಗಮಂದಿರ ಸೇರಿದಂತೆ ಖಾಸಗಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶ. ಬಳ್ಳಾರಿ ಗ್ರಾಮೀಣ ಭಾಗದಲ್ಲಿ 1-10ನೇ ತರಗತಿವರೆಗೆ ಬಂದ್ ಮಾಡಲಾಗಿದೆ. ಬಳ್ಳಾರಿ ನಗರದಲ್ಲಿ ಶಾಲಾ ಕಾಲೇಜು, ವಿಶ್ವವಿದ್ಯಾಲಯ ಕ್ಲೋಸ್ ಮಾಡಿನ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಆದೇಶ ಹೊರಡಿಸಿದ್ದಾರೆ.

ತುಮಕೂರು: ಮೇಕೆದಾಟು ಪಾದಯಾತ್ರೆ ಬಂದೋಬಸ್ತ್​​​ಗೆ ತೆರಳಿದ್ದ ಸಿಬ್ಬಂದಿಗೆ ಕೊರೊನಾ

ಕಾಂಗ್ರೆಸ್​ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊರೊನಾ ಸೋಂಕು ದೃಢವಾಗಿದೆ. ಮಾಜಿ ಸಭಾಪತಿ ವಿ.ಆರ್. ಸುದರ್ಶನ್​ಗೆ ಕೊರೊನಾ ಸೋಂಕು ದೃಢವಾಗಿದೆ. ರಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್​ಗೂ ಸೋಂಕು ತಗುಲಿದೆ. ಮನ್ಸೂರ್ ಕಾರು ಚಾಲಕ, ಸಿಬ್ಬಂದಿಗೂ ಕೊರೊನಾ ಸೋಂಕು ಖಚಿತವಾಗಿದೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ನಿಂದ ಪಾದಯಾತ್ರೆ ಸಂಬಂಧ, ಪಾದಯಾತ್ರೆ ಬಂದೋಬಸ್ತ್​​​ಗೆ ತೆರಳಿದ್ದ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ತುಮಕೂರು ಜಿಲ್ಲೆಯಲ್ಲೇ 50 ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢವಾಗಿದೆ. ಸದ್ಯ ಸೋಂಕಿತ ಸಿಬ್ಬಂದಿ ಹೋಮ್ ಕ್ವಾರಂಟೈನ್​​ನಲ್ಲಿ ಇದ್ದಾರೆ. ಪೊಲೀಸ್​ ಸಿಬ್ಬಂದಿಯ ಕುಟುಂಬಸ್ಥರಿಗೂ ಕೊವಿಡ್ ಪರೀಕ್ಷೆ ಮಾಡಿಸಲಾಗಿದೆ ಎಂಬ ಬಗ್ಗೆ ಟಿವಿ9ಗೆ ತುಮಕೂರು ಎಸ್​ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿಜಯನಗರ: ಉಚ್ಚಂಗೆಮ್ಮನ ಪುಣ್ಯಕ್ಷೇತ್ರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

ಉಚ್ಚಂಗೆಮ್ಮನ ಪುಣ್ಯಕ್ಷೇತ್ರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆದೇಶ ಹೊರಡಿಸಿದ್ದಾರೆ. ಜನವರಿ 17ರಂದು ಬನದ ಹುಣ್ಣಿಮೆ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲಿರುವ ಉಚ್ಚಂಗೆಮ್ಮನ ಕ್ಷೇತ್ರಕ್ಕೆ ಜನವರಿ 17 ರಂದು ಭಕ್ತರು ಬರುವಂತಿಲ್ಲ ಎಂದು ಆದೇಶಿಸಲಾಗಿದೆ. ಪೂಜೆ ಸಲ್ಲಿಸಲು ಅರ್ಚಕರಿ‌ಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ.

ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ

ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶುಕ್ರವಾರ ಕಣವಿಯವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಧಾರವಾಡದ ಎಸ್​ಡಿಎಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಧಾರವಾಡ ಜಿಲ್ಲಾಡಳಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್​ಗೆ ಕೊರೊನಾ ದೃಢ

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್​ಗೆ ಕೊರೊನಾ ದೃಢವಾಗಿದೆ. ಶನಿವಾರ ಕೊವಿಡ್-19 ಟೆಸ್ಟ್ ಮಾಡಿಸಿದ್ದ ಎಂಟಿಬಿ ನಾಗರಾಜ್​ಗೆ ಕೊವಿಡ್​ ಟೆಸ್ಟ್​ ರಿಪೋರ್ಟ್​ನಲ್ಲಿ ಸಚಿವರಿಗೆ ಕೊರೊನಾ ದೃಢವಾಗಿದೆ. ಸದ್ಯ ಸಚಿವ ಎಂಟಿಬಿ ನಾಗರಾಜ್​ ಹೋಂ ಐಸೋಲೇಷನ್​ ಆಗಿದ್ದಾರೆ.

TV9 Kannada


Leave a Reply

Your email address will not be published. Required fields are marked *