ಬಳ್ಳಾರಿ: ಗಣಿನಾಡಲ್ಲಿ‌ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಶತಕ ದಾಟಿದ್ದು ಕಳವಳ ಹೆಚ್ಚಿಸಿದೆ. ಬಳ್ಳಾರಿ, ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ 104 ಜನರಿಗೆ ಬ್ಲ್ಯಾಕ್ ಫಂಗಸ್ ಇನ್​ಫೆಕ್ಷನ್ ತಗುಲಿದೆ.

ಅವಿಭಜಿತ ಜಿಲ್ಲೆ ಬಳ್ಳಾರಿಯಲ್ಲಿ ಇದುವರಿಗೂ ಬ್ಲ್ಯಾಕ್ ಫಂಗಸ್‌‌ ಲಕ್ಷಣ ಹೊಂದಿದ್ದ 19 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ 65 ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಗಣಿನಾಡಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆ್ಯಂಫೋಟೆರಿಸಿನ್-ಬಿ ಇಂಜೆಕ್ಷನ್ ಕೊರತೆ ಎದುರಾಗಿದೆ. 2 ಸಾವಿರಕ್ಕೂ ಅಧಿಕ ವಯಲ್ಸ್ ನೀಡುವಂತೆ ಬಳ್ಳಾರಿ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿತ್ತು. ಆದ್ರೆ ಇದುವರಿಗೂ 280 ವೈಯಲ್‌ಗಳ ಮಾತ್ರ ಕಳಿಸಲಾಗಿದೆ. ಈಗ ಬಳ್ಳಾರಿಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಮತ್ತಷ್ಟು ನಡುಕ ಹುಟಿಸುತ್ತಿದೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಇನ್​ಫೆಕ್ಷನ್​ ತಡೆಯೋದು ಹೇಗೆ? ಇಲ್ಲಿದೆ ತಜ್ಞರ ಸಲಹೆ 

The post ಬಳ್ಳಾರಿಯಲ್ಲಿ ಶತಕ ದಾಟಿದ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ appeared first on News First Kannada.

Source: newsfirstlive.com

Source link