ಬಳ್ಳಾರಿ: ಗಣಿನಾಡು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದ್ದು, ಈ ಹಿಂದೆ ನಿತ್ಯ 2 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಇದೀಗ ಈ ಸಂಖ್ಯೆ 300ಕ್ಕೆ ಇಳಿಕೆಯಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲೆಯಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳು ಸಕ್ಸೆಸ್ ಆಗಿದ್ದು, ಚೈನ್ ಲಿಂಕ್ ಕಟ್ ಮಾಡುವಲ್ಲಿ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿದೆ. ಹೀಗಾಗಿ ನಿತ್ಯ ಎರಡು ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದ ಪ್ರಕರಗಳು, ಈಗ 300ಕ್ಕೆ ಬಂದು ನಿಂತಿದೆ. ಇದು ತೃಪ್ತಿದಾಯಕವಾಗಿದ್ದರೂ, ಸೊಂಕಿನ ಅಟ್ಟಹಾಸಕ್ಕೆ ಇನ್ನೂ ಸಂಪೂರ್ಣ ಬ್ರೇಕ್ ಬೀಳಬೇಕಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.12.30ಕ್ಕೆ ಇಳಿಕೆ – 14,304 ಹೊಸ ಕೊರೊನಾ ಪ್ರಕರಣ

ಇಂದು ಉಭಯ ಜಿಲ್ಲೆಗಳಲ್ಲಿ 399 ಪ್ರಕರಣಗಳು ಪತ್ತೆಯಾಗಿದ್ದು, 1,168 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 14 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 8,238 ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ ಒಟ್ಟು 91,863 ಸೊಂಕಿತರು ಪತ್ತೆಯಾಗಿದ್ದು, ಅದರಲ್ಲಿ 82,253 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,352 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

The post ಬಳ್ಳಾರಿಯಲ್ಲಿ 2 ಸಾವಿರದಿಂದ 300ಕ್ಕೆ ಇಳಿದ ದಿನದ ಸೋಂಕಿತರ ಸಂಖ್ಯೆ- ನಿಟ್ಟುಸಿರು ಬಿಟ್ಟ ಜನ appeared first on Public TV.

Source: publictv.in

Source link