ಬಳ್ಳಾರಿ ರಸ್ತೆಯಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಈ ಯುವತಿ ಬದುಕುಳಿದಿದ್ದೇ ಪವಾಡ! | Young girl survives despite fatal accident on Ballari Road Saturday



ಆದರೆ, ಡಿಕ್ಕಿ ಹೊಡೆದಾಕ್ಷಣ ಅವಳು ಹಾರಿ ಡಿವೈಡರ್ ನ ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಆಫ್ ಕೋರ್ಸ್ ಅವಳಿಗೆ ಗಾಯಗಳಾಗಿದ್ದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ,

TV9kannada Web Team


| Edited By: Arun Belly

Sep 21, 2022 | 10:56 AM




ಬೆಂಗಳೂರು:  ಈ ಯುವತಿ ನಿಜಕ್ಕೂ ಆದೃಷ್ಟವಂತೆ ಮಾರಾಯ್ರೇ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ (Ballari Road) ಕಳೆದ ಶನಿವಾರ (ಸೆಪ್ಟೆಂಬರ್ 17) ಬೆಳಗ್ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವಳಿಗೆ ಪ್ರಾಣಾಪಾಯವಾಗಬೇಕಿತ್ತು. ಆದರೆ, ಡಿಕ್ಕಿ ಹೊಡೆದಾಕ್ಷಣ ಅವಳು ಹಾರಿ ಡಿವೈಡರ್ ನ (Divider) ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಆಫ್ ಕೋರ್ಸ್ ಅವಳಿಗೆ ಗಾಯಗಳಾಗಿದ್ದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ (Baptist Hospital) ದಾಖಲಿಸಲಾಗಿದೆ, ಪ್ರಾಣಕ್ಕೇನೂ ಅಪಾಯವಿಲ್ಲ. ಬಳ್ಳಾರಿ ರಸ್ತೆ ಬಹಳ ಬ್ಯುಸಿಯಾಗಿರುತ್ತಾದ್ದರಿಂದ ಪಾದಾಚಾರಿಗಳು ಅತ್ಯಂತ ಜಾಗರೂಕತೆಯಿಂದ ಓಡಾಡಬೇಕು.


TV9 Kannada


Leave a Reply

Your email address will not be published.