ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವೃದ್ಧಾಶ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಬಳ್ಳಾರಿಯ ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಕಾರ್ಯಕ್ರಮದಲ್ಲಿ ರೆಡ್ಡಿ ಕುಟುಂಬ ಹಾಗೂ ವೃದ್ಧಾಶ್ರಮದ ವೃದ್ಧರು ಭಾಗಿಯಾಗಿದ್ದರು. ಸುಪ್ರೀಂ ಕೋರ್ಟ್ ರೆಡ್ಡಿಗೆ ತವರಿನಲ್ಲಿ ಇರಲು 8 ವಾರಗಳ ಕಾಲ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಜನಾರ್ದನ್ ರೆಡ್ಡಿ ಬಳ್ಳಾರಿಯಲ್ಲಿ ಇದ್ದಾರೆ. ಆದರೆ ಇದುವರೆಗೂ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದೀಗ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜನಾರ್ದನ್ ರೆಡ್ಡಿ ದಂಪತಿ ಭಾಗಿಯಾಗಿ, ಅಪ್ಪುಗೆ ನಮನ ಸಲ್ಲಿಸಿತು. ಬಳಿಕ ಮಾತನಾಡಿದ ರೆಡ್ಡಿ.. ಪುನೀತ್ ರಾಜಕುಮಾರ್ ಬಗ್ಗೆ ಇಂತಹ ಕಾರ್ಯಕ್ರಮ ಮಾಡುವ ಅನಿವಾರ್ಯತೆ ಬರುತ್ತೆ ಅಂತಾ ಅಂದ್ಕೊಂಡಿರಲಿಲ್ಲ. ಅವರ ಸಮಾಜ ಸೇವೆ ಅಪಾರವಾಗಿದೆ. ಪಾಕಿಸ್ತಾನದಲ್ಲೂ ಅಪ್ಪುಗೆ ಪ್ಯಾನ್ ಇದ್ದಾರೆ. ಸಾಮಾಜಿಕ ಉತ್ತಮ ಕಾರ್ಯಕ್ರಮಗಳು ಇಡೀ ಜಗತ್ತಿಗೆ ಗೊತ್ತಾಗಿದೆ.
ಅದಕ್ಕೆ ಪಾಕಿಸ್ತಾನಿಯರು ನಿಮ್ಮ ಕಾರ್ಯಗಳಿಗೆ ಧನ್ಯ ಅಂತಾ ಹೊಗಳುತ್ತಿದ್ದಾರೆ. ಅವ್ರ ತಂದೆ ಹಾದಿಯಲ್ಲಿ ಪ್ರತಿ ಸಿನಿಮಾ ಮಾಡುತ್ತಿದ್ದರು. ಹಣಕ್ಕಾಗಿ ಪುನೀತ್ ರಾಜಕುಮಾರ ನಟನೆ ಮಾಡಲಿಲ್ಲ. ಡಾ.ರಾಜಕುಮಾರ್ ಹೆಸರಿನಲ್ಲಿ ಬಳ್ಳಾರಿ ಉತ್ತಮ ಕಾರ್ಯಕ್ರಮಗಳಾಗಿವೆ. ಶ್ರೀಕೃಷ್ಣನ ನಾವು ನೋಡಲಿಲ್ಲ, ಅವ್ರ ರೂಪವಾಗಿ ರಾಜಕುಮಾರ್ ಬಾಳಿದ್ದರು. ಸೌಜನ್ಯ, ವಿನಯ ಸರಳತೆ ಅಪ್ಪು ಹೊಂದಿದ್ದರು. 16 ಕ್ಕೂ ಹೆಚ್ಚು ವೃದ್ಧಾಶ್ರಮ ಮಾಡಿದ್ದಾರೆ, 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ಒಳ್ಳೆ ಕೆಲಸ ಮಾಡುವವರು ಬೇಗ ಹೋಗ್ತಾರೆ ಅಂತಾರೆ ಅದು ಪುನೀತ್ ವಿಚಾರದಲ್ಲಿ ಹಾಗೇ ಹಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.