ನವದೆಹಲಿ: ಇಂದಿನಿಂದ ಸಂಸತ್​​ ಮುಂಗಾರು ಅಧಿವೇಶನ ಆರಂಭವಾಗಿದೆ. ಹದನೇಳನೇ ಲೋಕಸಭಾ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಸತೀಶ್​​ ಜಾರಕಿಹೊಳಿ ವಿರುದ್ಧ ಗೆದ್ದ ಬಿಜೆಪಿ ಸಂಸದೆ ಮಂಗಳ ಸುರೇಶ್​​ ಅಂಗಡಿಯವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದರು.

ಲೋಕಸಭಾ ಸದಸ್ಯಳಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ; ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು; ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆ. ಈಗ ಕೈಗೊಂಡಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನೆರವೆರಿಸುತ್ತೇನೆಂದು ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ ಮಂಗಳ ಅಂಗಡಿಯವರು ಬಸವಣ್ಣನವರ ಹೆಸರಿನಲ್ಲಿ ಪ್ರಮಾಣವಚನ ಪಡೆದುಕೊಂಡರು.

ಇದನ್ನೂ ಓದಿ: ಸಂಸತ್​​ನಲ್ಲಿ ವಿಪಕ್ಷಗಳು ಕೊರೋನಾ ಬಗ್ಗೆ ಅತಿ ತೀಕ್ಷ್ಣ ಪ್ರಶ್ನೆಗಳು ಕೇಳಲಿ; ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ ಬೈ ಎಲೆಕ್ಷನ್​ನಲ್ಲಿ ಬಿಜೆಪಿ​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಂಗಳಾ ಅಂಗಡಿ 3,986 ಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದರು. 4,36,868 ಮತಗಳನ್ನು ಪಡೆಯುವ ಮೂಲಕ ಮಂಗಳಾ ಅಂಗಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ್ದರು. ಸತೀಶ್ ಜಾರಕಿಹೊಳಿ 4,32,882 ಮತಗಳನ್ನು ಪಡೆದಿದ್ದರು.

The post ಬಸವಣ್ಣ ಹೆಸರಿನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ಸಂಸದೆ ಮಂಗಳ ಸುರೇಶ್​ ಅಂಗಡಿ appeared first on News First Kannada.

Source: newsfirstlive.com

Source link