ಬಸವನಗುಡಿ ಸರ್ಕಾರಿ ಪ್ರೌಢಶಾಲೆಯ ಪಿಯುಸಿ ವಿದ್ಯಾರ್ಥಿನಿಗಳಿಗೆ 235 ಆಂಡ್ರಾಯ್ಡ್ ಟ್ಯಾಬ್ಲೆಟ್ ನೀಡಿದ ಅಕ್ಷಯ ಪಾತ್ರ ಫೌಂಡೇಶನ್ | Akshaya patra foundation distributes android tablet to 235 girls in basavanagudi government high school


ಬಸವನಗುಡಿ ಸರ್ಕಾರಿ ಪ್ರೌಢಶಾಲೆಯ ಪಿಯುಸಿ ವಿದ್ಯಾರ್ಥಿನಿಗಳಿಗೆ 235 ಆಂಡ್ರಾಯ್ಡ್ ಟ್ಯಾಬ್ಲೆಟ್ ನೀಡಿದ ಅಕ್ಷಯ ಪಾತ್ರ ಫೌಂಡೇಶನ್

ಬಸವನಗುಡಿ ಸರ್ಕಾರಿ ಪ್ರೌಢಶಾಲೆಯ ಪಿಯುಸಿ ವಿದ್ಯಾರ್ಥಿನಿಗಳಿಗೆ 235 ಆಂಡ್ರಾಯ್ಡ್ ಟ್ಯಾಬ್ಲೆಟ್ ನೀಡಿದ ಅಕ್ಷಯ ಪಾತ್ರ ಫೌಂಡೇಶನ್

ಬೆಂಗಳೂರು: ಅಕ್ಷಯ ಪಾತ್ರ ಫೌಂಡೇಶನ್‍ನ (akshaya patra foundation) ಡಿಜಿಟಲ್ ಶಿಕ್ಷಣ ಉಪಕ್ರಮದ ಪ್ರಾರಂಭವನ್ನು ಗುರುತಿಸಲು ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಎನ್‍ಟಿಟಿ ಲಿಮಿಟೆಡ್ ಸಹಯೋಗದಲ್ಲಿ ಬಸವನಗುಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕಿಯರ ಪಿಯುಸಿಯ 235 ವಿದ್ಯಾರ್ಥಿನಿಯರಿಗೆ (basavanagudi government high school) ಆಂಡ್ರಾಯ್ಡ್ ಟ್ಯಾಬ್ಲೆಟ್‍ಗಳನ್ನು ಒದಗಿಸಿದೆ. ಅಕ್ಷಯ ಪಾತ್ರವು ಕಾರ್ಪೊರೇಟ್ ದಾನಿಗಳು ಮತ್ತು ಬೈಜೂಸ್ ನ ಬೆಂಬಲದೊಂದಿಗೆ ಡಿಜಿಟಲ್ ವಿಭಜನೆಯನ್ನು ಮತ್ತು ಮತ್ತಷ್ಟು ಡಿಜಿಟಲ್ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡಲು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಆಧುನಿಕ ಶಿಕ್ಷಣಕ್ಕೆ ಉಚಿತ ಪ್ರವೇಶವನ್ನು ಒದಗಿಸುವ ಮೂಲಕ ಉಪಕ್ರಮವನ್ನು ಜಾರಿಗೊಳಿಸುತ್ತಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಯಾಂಡಲ್‍ವುಡ್ ತಾರೆ ಶೈನ್ ಶೆಟ್ಟಿ. ಎನ್‍ಟಿಟಿ ಮ್ಯಾನೇಜ್ಡ್ ಸರ್ವೀಸಸ್ ಉಪಾಧ್ಯಕ್ಷ ಪ್ರಸಾದ್ ಮೊಕ್ಕರಾಳ, ಎನ್‍ಟಿಟಿ ಸಪೋರ್ಟ್ ಸರ್ವೀಸಸ್ ವಿಭಾಗದ ಉಪಾಧ್ಯಕ್ಷ ರವಿ ಕಲಘಟಗಿ, ಮತ್ತು ಡಿಡಿಪಿಯು ರಾಜ್‍ಕುಮಾರ್ ಉಪಸ್ಥಿತರಿದ್ದರು. ಅಕ್ಷಯಪಾತ್ರೆ ಫೌಂಡೇಷನ್ ಪ್ರಮುಖ ಸಂವಹನ ವಿಭಾಗದ ನಿರ್ದೇಶಕ ನವೀನ ನರೇಂದ್ರ ದಾಸ ಮತ್ತು ಅಕ್ಷಯಪಾತ್ರ ಸಿಎಂಓ ಸಂದೀಪ್ ತಲವಾರ ಭಾಗವಹಿಸಿದ್ದರು.

ಅವರ ಸಿಎಸ್‍ಆರ್ ಉಪಕ್ರಮದ ಭಾಗವಾಗಿ, ಎನ್‍ಟಿಟಿ ಲಿಮಿಟೆಡ್ ಪ್ರಾಥಮಿಕವಾಗಿ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರದಲ್ಲಿ ಮಧ್ಯಸ್ಥಿಕೆಗಳ ಮೇಲೆ ಕೇಂದ್ರೀಕರಿಸಿದೆ. ಅವರ ಸಿಎಎಸ್‍ರ್ ಪ್ರಯತ್ನಗಳಿಗೆ, ಎನ್‍ಟಿಟಿ ಈಗ ಅಕ್ಷಯ ಪಾತ್ರದ ಡಿಜಿಟಲ್ ಶಿಕ್ಷಣ ಕಾರ್ಯಕ್ರಮವನ್ನು ಬೆಂಬಲಿಸುತ್ತಿದೆ, ಇದು ಅಂತರ್ಗತತೆಯ ಮೇಲೆ ಕೇಂದ್ರೀಕರಿಸುವ ಮತ್ತು ಡಿಜಿಟಲ್ ಇಂಡಿಯಾದ ಸರ್ಕಾರದ ದೃಷ್ಟಿಗೆ ಕೊಡುಗೆ ನೀಡುವ ಮೂಲಕ ಸಾಮಥ್ರ್ಯ ಆಧಾರಿತ ಕಲಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತದೆ. ಪ್ರತಿ ಟ್ಯಾಬ್ಲೆಟ್ ಅನ್ನು ಬೈಜೂಸ್‍ನ ಕಲಿಕೆಯ ಅಪ್ಲಿಕೇಶನ್‍ನೊಂದಿಗೆ ಪೂರ್ವ- ಸ್ಥಾಪಿಸಲಾಗಿದೆ, ಮಕ್ಕಳು ಉತ್ತಮ ಗುಣಮಟ್ಟದ ಮತ್ತು ತಂತ್ರಜ್ಞಾನ ಚಾಲಿತ ಕಲಿಕೆಯ ಕಾರ್ಯಕ್ರಮಗಳ ಲಭ್ಯತೆ ಹೊಂದಿದ್ದಾರೆ ಎಂದು ಇದು ಖಚಿತಪಡಿಸಿಕೊಳ್ಳಲಿದೆ. 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲಾಯಿತು, ಅವರಿಗೆ ಜೆಇಇ, ನೀಟ್ ಮತ್ತು ಕರ್ನಾಟಕ ಸಿಇಟಿ ತಯಾರಿ ಸಾಮಗ್ರಿಗಳು ಲಭ್ಯವಾಗುವಂತೆ ಒದಗಿಸಲಾಗಿದೆ.

“ಅಕ್ಷಯ ಪಾತ್ರದ ಡಿಜಿಟಲ್ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲು ನನಗೆ ಈ ಅವಕಾಶ ಸಿಕ್ಕಿರುವುದು ಗೌರವವಾಗಿದೆ. ಕೋವಿಡ್ ನಂತರದ ಯುಗದಲ್ಲಿ, ಎಲ್ಲವೂ ಡಿಜಿಟಲ್ ಆಗುವುದರೊಂದಿಗೆ, ಅಗತ್ಯ ಮಧ್ಯಸ್ಥಿಕೆಗಳನ್ನು ಪರಿಚಯಿಸುವ ಮೂಲಕ ಡಿಜಿಟಲ್ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಅವಶ್ಯಕತೆಯಿದೆ. ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಅಕ್ಷಯ ಪಾತ್ರ ದೇಶಾದ್ಯಂತ ತನ್ನ ಸೇವೆಗಳನ್ನು ನೀಡುತ್ತಿದೆ. ಪೌಷ್ಟಿಕಾಂಶಯುಕ್ತ ಊಟದ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆಯನ್ನು ಖಚಿತಪಡಿಸಿಕೊಳ್ಳಲು ಅವರು ಈಗ ಒಂದು ಹೆಜ್ಜೆ ಮುಂದಿಟ್ಟಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇಂತಹ ಉದಾತ್ತ ಕಾರ್ಯವನ್ನು ಬೆಂಬಲಿಸಲು ಇಂತಹ ಸಂಘಟನೆಗಳು ಮುಂದೆ ಬರಬೇಕಾಗಿದೆ. ಮಕ್ಕಳು ಮತ್ತು ಅಕ್ಷಯಪಾತ್ರೆ ಅವರ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ” ಎಂದು ಕನ್ನಡ ಟಿವಿ ನಟ ಶೈನ್ ಶೆಟ್ಟಿ ಹೇಳಿದರು.

ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಅಕ್ಷಯ ಪಾತ್ರಾ ಫೌಂಡೇಶನ್‍ನ ಸಿಎಂಒ ಸಂದೀಪ್ ತಲ್ವಾರ್, “ಭಾರತದಲ್ಲಿ ಯಾವುದೇ ಮಗು ಹಸಿವಿನಿಂದ ಶಿಕ್ಷಣದಿಂದ ವಂಚಿತವಾಗಬಾರದು” ಎಂಬ ನಮ್ಮ ದೃಷ್ಟಿ ಶಿಕ್ಷಣವು ಪೋಷಣೆಗೆ ಏಕೈಕ ಮಾರ್ಗವಾಗಿದೆ ಎಂಬ ನಮ್ಮ ನಂಬಿಕೆಯೊಂದಿಗೆ ನೇರ ಹೊಂದಾಣಿಕೆಯಾಗಿದೆ. ಈ ದೇಶದ ಸಂತೋಷದ ಭವಿಷ್ಯ. ಇಂಟರ್ನೆಟ್ ಅಥವಾ ಸರಿಯಾದ ತಂತ್ರಜ್ಞಾನದ ಪ್ರವೇಶದ ಕೊರತೆಯಿಂದಾಗಿ ಯಾವುದೇ ಮಗು ಅವಿದ್ಯಾವಂತರಾಗಿ ಉಳಿಯಬಾರದು ಎಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ‘ಡಿಜಿಟಲ್ ಶಿಕ್ಷಣ ಕಾರ್ಯಕ್ರಮ’ವನ್ನು ಬೆಂಬಲಿಸಿದ್ದಕ್ಕಾಗಿ ಓಖಿಖಿ ಲಿಮಿಟೆಡ್‍ಗೆ ನಾವು ಅಪಾರವಾಗಿ ಕೃತಜ್ಞರಾಗಿರುತ್ತೇವೆ. ಅವರ ಬೆಂಬಲವು ನಮಗೆ ಹೆಚ್ಚಿನದನ್ನು ಮಾಡಲು ಮತ್ತು ಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಅನುವು ಮಾಡಿಕೊಡುತ್ತದೆ. ಈ ಸಹಯೋಗವು ಇನ್ನೂ ಹಲವು ವರ್ಷಗಳವರೆಗೆ ಈ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅಭಿಪ್ರಾಯಪಟ್ಟರು.

“ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಅವರ ಸಾಮಾಜಿಕ- ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ‘ಗುಣಮಟ್ಟದ ಶಿಕ್ಷಣ’ ಪಡೆಯುವುದು. ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳು ಕೈಗೆಟುಕುವ ಸಾಮಥ್ರ್ಯ ಅಥವಾ ಪ್ರವೇಶದ ಸಮಸ್ಯೆಗಳಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳಬೇಕಾಗಿಲ್ಲದ ಜಗತ್ತನ್ನು ರಚಿಸಲು ಡಿಜಿಟಲ್ ಒಳಗೊಳ್ಳುವಿಕೆ ಸಹಾಯ ಮಾಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ತತ್ತ್ವಶಾಸ್ತ್ರದ ಮೂಲಾಧಾರವು ನಮ್ಮ ಅಸ್ತಿತ್ವದಲ್ಲಿರುವ ಶಿಕ್ಷಣ ಪರಿಸರ ವ್ಯವಸ್ಥೆಗೆ ಸ್ಪಷ್ಟವಾದ ಪರಿಣಾಮವನ್ನು ತರುವುದರ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಅಕ್ಷಯ ಪಾತ್ರ ಫೌಂಡೇಶನ್‍ನೊಂದಿಗೆ ಪಾಲುದಾರಿಕೆ ಹೊಂದಲು ಮತ್ತು ನಮ್ಮ ಸಾಮಾಜಿಕ ಪ್ರಭಾವದ ಉಪಕ್ರಮವನ್ನು ಬಲಪಡಿಸಲು ನಮಗೆ ಗೌರವವಿದೆ,” ಎಂದು ಎನ್‍ಟಿಟಿ ಲಿಮಿಟೆಡ್‍ನ ಉಪಾಧ್ಯಕ್ಷರು ಹೇಳಿದರು.

ಅಕ್ಷಯ ಪಾತ್ರವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ಮಹತ್ವಾಕಾಂಕ್ಷಿ ಹಿರಿಯ ಮಾಧ್ಯಮಿಕ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಉತ್ತಮವಾಗಿ ಸಂಶೋಧಿಸಲಾದ ಶೈಕ್ಷಣಿಕ ವಿಷಯದ ವಿತರಣೆಯಲ್ಲಿ ಈ ವಿದ್ಯಾರ್ಥಿಗಳನ್ನು ಬೆಂಬಲಿಸಲು ಇದು ಶಿಕ್ಷಕರೊಂದಿಗೆ ಕೆಲಸ ಮಾಡುತ್ತಿದೆ. ಈ ಉಪಕ್ರಮದ ಭಾಗವಾಗಿ, ಆಯ್ದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಬೆಂಬಲಿಸಲು ಎರಡು ವರ್ಷಗಳವರೆಗೆ ಇಂಟರ್ನೆಟ್ ಸಂಪರ್ಕವನ್ನು ಪಡೆಯುತ್ತಾರೆ.

ಬೈಜೂಸ್ ನ ಡಿಜಿಟಲ್ ಶೈಕ್ಷಣಿಕ ವಿಷಯವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಮಾಜ ವಿಜ್ಞಾನ ಮತ್ತು ವಾಣಿಜ್ಯದಂತಹ ವಿಷಯಗಳ ಅಧ್ಯಯನ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ. ಇದು ಅವರಿಗೆ ನೀಟ್, ಜೆಇಇ ಮತ್ತು ಕರ್ನಾಟಕ ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಅಧ್ಯಯನ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯ ಮಂಡಳಿಗಳ ಜೊತೆಗೆ ಐಸಿಎಸ್‍ಇ ಮತ್ತು ಸಿಬಿಎಸ್‍ಇ ಮಂಡಳಿಗಳ ಮೇಲೆ ಕೇಂದ್ರೀಕರಿಸುವ ರೀತಿಯಲ್ಲಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ವಿಷಯವನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

TV9 Kannada


Leave a Reply

Your email address will not be published. Required fields are marked *