ಬಸವರಾಜ್ ರಾಯರೆಡ್ಡಿ-ಹಾಲಪ್ಪ ಆಚಾರ್ ಶೀತಲ ಸಮರ; ಪೊಲೀಸರ ಮೇಲೆ ಸಿಟ್ಟು ಮಾಡ್ಕೊಂಡ ಹಾಲಪ್ಪ ಏನ್ಮಾಡಿದರು!? | Cold war between ex minister basavaraj rayareddy and minister halappa achar in Koppal

ಬಸವರಾಜ್ ರಾಯರೆಡ್ಡಿ-ಹಾಲಪ್ಪ ಆಚಾರ್ ಶೀತಲ ಸಮರ; ಪೊಲೀಸರ ಮೇಲೆ ಸಿಟ್ಟು ಮಾಡ್ಕೊಂಡ ಹಾಲಪ್ಪ ಏನ್ಮಾಡಿದರು!?

ಬಸವರಾಜ್ ರಾಯರೆಡ್ಡಿ, ಹಾಲಪ್ಪ ಆಚಾರ್ ಶೀತಲ ಸಮರ; ಪೊಲೀಸರ ಮೇಲೆ ಸಿಟ್ಟುಮಾಡಿಕೊಂಡ ಸಚಿವ ಹಾಲಪ್ಪ ಏನ್ಮಾಡಿದರು!?

ಕೊಪ್ಪಳ: ಅವರು ಹಾಲಪ್ಪ ಆಚಾರ್, ಸಚಿವರು! ಆದರೆ ಪೊಲೀಸರು ಮಾಜಿ ಸಚಿವರೊಬ್ಬರಿಗೆ ಭದ್ರತೆ ನೀಡಿದರು ಎಂದು ಸಿಟ್ಟು ಮಾಡಿಕೊಂಡು, ಸೆಡವಿನಿಂದ ತಾವು ನಡೆದಿದ್ದೇ ದಾರಿ ಎಂದು ಸಚಿವರಾದರೂ… ಪೊಲೀಸ್​ ಭದ್ರತೆ ಪಡೆಯದೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇದರಿಂದ, ಭದ್ರತೆ ನೀಡಬೇಕಾದ ಕೊಪ್ಪಳ ಪೊಲೀಸರಿಗೆ ಪೀಕಲಾಟಕ್ಕೆ ಇಟ್ಕೊಂಡಿದೆ.

ಪೊಲೀಸ್ ಇಲಾಖೆಗೆ ಮಾಡೋದಕ್ಕೆ ಸಾಕಷ್ಟು ಕೆಲಸಗಳು ಇವೆ. ನಾನು ಅವಶ್ಯ ಇದ್ದಾಗ ಮಾತ್ರ ಅವರನ್ನ ಬಳಸಿಕೊಳ್ಳುತ್ತೇನೆ. ಖಾಲಿ ಇದ್ದಾಗ ಅವರನ್ನ ಕಟ್ಟಕೊಂಡು ಯಾಕೆ ಅಡ್ಡಾಡಲಿ ಎಂದು ಹಾಲಪ್ಪ ಆಚಾರ್ ಗುಟುರು ಹಾಕಿದ್ದಾರೆ. ಹೀಗಾಗಿ ಪೊಲೀಸ್ ಭದ್ರತೆಯನ್ನ ತಿರಸ್ಕರಿಸಿರುವ ಸಚಿವ ಹಾಲಪ್ಪ ಆಚಾರ್ ಕ್ಷೇತ್ರದಲ್ಲಿ ಪೊಲೀಸರನ್ನ ಬಿಟ್ಟು ಓಡಾಡುತ್ತಿದ್ದಾರೆ.

ಪೊಲೀಸರಿಗೆ ಇಲಾಖೆಯಲ್ಲಿ ಮಾಡೋಕೆ ಬೇಕಾದಷ್ಟು ಕೆಲಸ ಇದೆ. ನಾನ್ಯಾಕೆ ಅವರ ಉದ್ಯೋಗ ಕೆಡಸಲಿ. ಪೊಲೀಸರಿಗೆ ಇಲಾಖೆಯಲ್ಲಿ ಅವರ ಕೆಲಸ ಮಾಡೋಕೆ ಆಗ್ತಿಲ್ಲ. ಇಲಾಖೆಯಲ್ಲಿ ನ್ಯೂನ್ಯತೆಗಳಿವೆ ಎಂದಿರುವ ಹಾಲಪ್ಪ ಆಚಾರ್, ಇದರ ಮಧ್ಯೆ ನಮ್ದೊಂದು ಜಾತ್ರೆ, ಆಡಂಬರ ಯಾಕೆ ಬೇಕು? ನನಗೆ ಅದೆಲ್ಲಾ ಬೇಡಾ ಎಂದಿದ್ದಾರೆ.

ನಾನು ಹಿಂದೆ ಯಾವತ್ತೂ ಪೊಲೀಸರನ್ನ ಕಟ್ಟಿಕೊಂಡು ಓಡಾಡಿಲ್ಲ. ನಾನು ಜನರ ಮಧ್ಯೆ ಇರೋನು, ಮಂತ್ರಿ ಆದ ಮೇಲೆ ಹೆಚ್ಚಿಗೆ ಭದ್ರತೆ ನನಗೆ ಬೇಡಾ. ಪೊಲೀಸರ ಉದ್ಯೋಗ ಹಾಳಾಗತ್ತೆ ಎಂದು ಹಾಲಪ್ಪ ಆಚಾರ್ ಕ್ಲುಪ್ತವಾಗಿ ಹೇಳಿದ್ದಾರೆ.

ನಾನು ನಿರ್ಭಯದಿಂದ ಓಡಾಡ್ತೀನಿ ಎಂದು ಹಾಲಪ್ಪ ಆಚಾರ್ ಪೊಲೀಸ್ ಇಲಾಖೆ ಮೇಲೆ ಯಾಕೆ ಸಿಟ್ಟಾದ್ರು ಎಂದು ಕೆದಕಿದಾಗ… ಸದರಿ ಪೊಲೀಸರು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ ಭದ್ರತೆ ನೀಡಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಇದೀಗ ಹಾಲಿ ಸಚಿವ ಹಾಲಪ್ಪ ಆಚಾರ್ ಅವರು ಪೊಲೀಸರನ್ನು ಬಿಟ್ಟು ಓಡಾಡುತ್ತಿದ್ದಾರೆ. ಇದರಿಂದ ಬಸವರಾಜ್ ರಾಯರೆಡ್ಡಿ ಮತ್ತು ಹಾಲಪ್ಪ ಆಚಾರ್ ನಡುವಣ ಶೀತಲ ಸಮರ ಮತ್ತೊಮ್ಮೆ ಜಗಜ್ಜಾಹೀರಾಗಿದೆ!

ಇದನ್ನೂ ಓದಿ:
ಸಿಎಂ ಬೊಮ್ಮಾಯಿ ಅ.11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ; ವೇಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಕನ್ನಡದಲ್ಲೂ ಪ್ರಸಾರ

ಇದನ್ನೂ ಓದಿ:
ಹಾಲಪ್ಪ ಆಚಾರ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಬಸವರಾಜ ರಾಯರೆಡ್ಡಿ ವಿರುದ್ಧ ತೀವ್ರ ಆಕ್ರೋಶ

TV9 Kannada

Leave a comment

Your email address will not be published. Required fields are marked *