ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲಾ ವರ್ಗದ ಅಭಿಮಾನಿಗಳ ಹೊಂದಿರುವ ಅಪರೂಪದ ನಟ. ಕಿರಿಯರಿಂದ ಹಿರಿಯವರೆಗೂ ಪುನೀತ್ ಅವರ ಸಿನಿಮಾ ಎಂದರೆ ಬಹಳ ಅಚ್ಚುಮೆಚ್ಚು. ಅಪ್ಪು ಎಲ್ಲರ ಮನೆಮಗ ಆಗಿದ್ದ.
ಹೌದು, ಕೆಎಸ್ಆರ್ಟಿಸಿ ಬಸ್ ಮೇಲಿದ್ದ ಅಪ್ಪು ಫೋಟೊ ನೋಡಿ ನಿರ್ಗತಿಕ ಅಜ್ಜಿಯೊಬ್ಬರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತಮ್ಮ ಸೆರಗಿನಿಂದ ಅಪ್ಪು ಫೋಟೊ ಮೇಲಿದ್ದ ಧೂಳು ಸ್ವಚ್ಚಗೊಳಿಸಿ ಮುತ್ತಿಟ್ಟರು.
ಕೊಪ್ಪಳ ಕುಕನೂರು ತಾಲೂಕಿನ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ಘಟನೆ ನಡೆದಿದೆ. ಕುಕನೂರು-ಅರಿಕೇರಾಗೆ ತೆರಳುತ್ತಿದ್ದ ಬಸ್ ಮೇಲೆ ಇದ್ದ ಅಪ್ಪು ಫೋಟೊ ನೋಡಿ ಅಜ್ಜಿ ಕಣ್ತುಂಬಿ ಬಂದಿದೆ.
ಅಜ್ಜಿಯ ಭಾವುಕತೆಯ ಸಂದರ್ಭವನ್ನು ಸ್ಥಳೀಯ ಮಂಜುನಾಥ ಎಂಬುವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.