ಬಸ್​ ನಿಲ್ದಾಣದಲ್ಲಿ ಚಿನ್ನವಿದ್ದ ಬ್ಯಾಗ್​ ಬಿಟ್ಟು ಹೋದ ಮಹಿಳೆ: ವಾಪಸ್​ ಸಿಕ್ಕಿದ್ದು ಹೇಗೆ?


ಬೆಂಗಳೂರು: ಪ್ರಯಾಣಿಕರೊಬ್ಬರು ಬಸ್​ ಸ್ಟ್ಯಾಂಡ್​ಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗ್​ನ್ನು ಬಿಎಂಟಿಸಿ ಅಧಿಕಾರಿಗಳು ವಾಪಸ್​ ನೀಡಿ ಮಾನವೀಯತೆ ಮೆರೆದಿದ್ದಾರೆ.

ರಾಜೇಶ್ವರಿ ಎಂಬ ಪ್ರಯಾಣಿಕರೊಬ್ಬರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನ, ಹಣ ಹಾಗೂ ಮೊಬೈಲ್ ಪೋನ್ ಇದ್ದ ಬ್ಯಾಗ್​ನ್ನು ಹೆಬ್ಬಾಳದ ಎಸ್ಟಿಮ್ ಮಾಲ್ ಬಳಿಯಿರುವ ಬಿಎಂಟಿಸಿ ಬಸ್ ಸ್ಟ್ಯಾಂಡ್​ನಲ್ಲಿ ಬಿಟ್ಟು ಹೋಗಿದ್ರು. ಅದೃಷ್ಟವಶಾತ್​ ಅದು  ಸ್ಥಳದಲ್ಲಿದ್ದ ಬಿಎಂಟಿಸಿಯ ಟ್ರಾಫಿಕ್ ಕಂಟ್ರೋಲರ್ ಗಳಾದ ಪ್ರಕಾಶ್ ಮತ್ತು ಶಮಿ ಶಾಬ್ ಅವರ ಕೈಗೆ ಸಿಕ್ಕಿದೆ.

ಬ್ಯಾಗ್​ ಕಳೆದುಕೊಂಡವರು ಆ ಬಳಿಕ ತಮ್ಮ ಪೋನ್​ಗೆ ಕರೆ ಮಾಡಿ ವಿಚಾರಸಿದಾಗ ಹೆಬ್ಬಾಳ ಪೊಲೀಸ್ ಸ್ಟೇಷನ್ ಬರುವಂತೆ ಹೇಳಲಾಗಿದೆ. ಠಾಣೆಗೆ ಬಂದ ನಂತರ ಪರಿಶೀಲನೆ ಕೈಗೊಂಡು ಇವರೇ ಬ್ಯಾಗ್​ನ ಮಾಲೀಕರು ಎಂದು ಖಾತ್ರಿ ಆದ ಬಳಿಕ ವಾಪಸ್​ ನೀಡಿದ್ದು, ಬ್ಯಾಗ್​ ಪಡೆದುಕೊಂಡ ಮಹಿಳೆ ನಿಟ್ಟುಸಿರು ಬಿಟ್ಟಿದ್ದಾರೆ. ಮೂಲಗಳ ಪ್ರಕಾರ 1,000 ಕ್ಯಾಶ್, ಏಳು ಗೋಲ್ಡ್ ರಿಂಗ್, ಎರಡು ಗೋಲ್ಡ್ ಚೈನ್, ಮಾಂಗಲ್ಯ ಸರ ಒಂದು, ಕಿವಿ ಓಲೆ ಎರಡು ಹಾಗೂ ಒಂದು ಮೊಬೈಲ್ ಪೋನ್ ಬ್ಯಾಗ್​ಲ್ಲಿ ಇತ್ತು. ಇದರ ಒಟ್ಟು ಮೌಲ್ಯ ಆರು‌ ಲಕ್ಷದ ಮೂವತ್ತೊಂದು ಸಾವಿರದ ಐನೂರು ರೂಪಾಯಿಗಳು ಅಂತ ಅಂದಾಜಿಸಲಾಗಿದೆ.

News First Live Kannada


Leave a Reply

Your email address will not be published. Required fields are marked *