ಬಸ್​ ಸೌಲಭ್ಯ ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ..ವಿಭಿನ್ನ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು


ರಾಯಚೂರು: ಸಮರ್ಪಕ ಬಸ್​ ಸೌಲಭ್ಯ ಕಲ್ಪಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್​ ತಡೆದು  ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ನಡೆಸಿದ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡದಲ್ಲಿ ನಡೆದಿದೆ.

ನಾರಬಂಡ, ನಾರಬಂಡ ತಾಂಡಾ, ಹುಣಚೇಡ್, ಅಲ್ಕೋಡ್, ಶಾವಂತಗಲ್, ವಡವಟ್ಟಿ ಸೇರಿದಂತೆ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಿರವಾರಕ್ಕೆ ಬರುತ್ತಾರೆ. ಆದರೆ ಇವೆಲ್ಲ ಗ್ರಾಮಕ್ಕೆ ಒಂದೇ ಬಸ್​ ಬಿಟ್ಟಿರುವದರಿಂದ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿಡಿದು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.

ಇನ್ನೂ ಕೆಲ ವಿದ್ಯಾರ್ಥಿಗಳು ಬಸ್​ನ ಬಾಗಿಲು ಬಳಿ ಜೋತು ಬಿದ್ದು ಬರುತ್ತಿದ್ದು ಶಾಲೆಗೆ ಹೋಗಲು ಸರ್ಕ್​ಸ್​ ಮಾಡಬೇಕೆಗಿದೆ. ಸಾರಿಗೆ ಸಂಸ್ಥೆಯ ನಿರ್ಲಕ್ಯಕ್ಕೆ ಬೇಸತ್ತ ವಿದ್ಯಾರ್ಥಿಗಳು ಬಸ್​ ತಡೆದು ಪ್ರತಿಭಟನೆ ನಡೆಸಿದರು ಯಾವವೊಬ್ಬ ಅಧಿಕಾರಿಗಳು ಬಂದಿಲ್ಲ. ಆದ್ದರಿಂದ ನಾರಬಂಡದಿಂದ ಸಿರವಾರ ತಹಶೀಲ್ದಾರ್ ಕಚೇರಿಗೆ ವಿದ್ಯಾರ್ಥಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *