ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ರಾಜ್ಯದಾದ್ಯಂತ 14 ದಿನಗಳ ಕಠಿಣ ಕ್ಲೋಸ್​​​ಡೌನ್​ ನಿಯಮಗಳನ್ನು ಜಾರಿಗೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಸಾರಿಗೆ ಇಲಾಖೆ ಹೆಚ್ಚುವರಿ ಬಸ್​​ಗಳನ್ನು ಓಡಿಸಲು ಮುಂದಾಗಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ನಗರದ ಕೆಎಸ್​ಆರ್​​ಟಿಸಿ ನಿಲ್ದಾಣಕ್ಕೆ ಭೇಟಿ ನೀಡಿ ಬಸ್​​ಗಳ ವ್ಯವಸ್ಥೆಯನ್ನ ಪರಿಶೀಲಿಸಿದರು.

ಈ ವೇಳೆ ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿದ ಸಚಿವರು, ಎಲ್ಲಾ ಬಸ್​​ಗಳಲ್ಲೂ ಕೂಡ ಕೊರೊನಾ ನಿಯಮ ಪಾಲನೆ ಮಾಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್​ ಮಾಡಿರುವುದರಿಂದ ಪ್ರಯಾಣಿಕರ ಕೊರತೆ ಆಗುತ್ತೆ ಹೊರತು ಬಸ್ ಕೊರತೆ ಆಗಲ್ಲ ಎಂದರು.

ರಾತ್ರಿ ಏಳು-ಎಂಟು ಗಂಟೆ ಆಗ್ತಿದ್ದಂತೆ ಜನ ಖಾಲಿ ಆಗುತ್ತಾರೆ. ಆದ್ದರಿಂದ ಇಂದು ಸುಮಾರು 3 ಲಕ್ಷ ಮಂದಿಗಾಗುವಷ್ಟು ಬಸ್ ವ್ಯವಸ್ಥೆ ನಮ್ಮಲ್ಲಿದೆ. ಅಷ್ಟು ಜನ ಹೋಗಲ್ಲ. ಹೆಚ್ಚು ಎಂದರೇ ಒಂದೂವರೆ ಲಕ್ಷ ಜನ ಹೋಗಬಹುದು. ರಾತ್ರಿ 9 ಘಂಟೆ ನಂತರ ಬಸ್ ವ್ಯವಸ್ಥೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

The post ಬಸ್ ಕೊರತೆ ಆಗಲ್ಲ.. 3 ಲಕ್ಷ ಮಂದಿಗಾಗುವಷ್ಟು ವ್ಯವಸ್ಥೆ ಇದೆ -ಸಚಿವ ಲಕ್ಷ್ಮಣ ಸವದಿ appeared first on News First Kannada.

Source: News First Kannada
Read More