ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಾ? KSRTC ಎಂ.ಡಿ ಹೇಳಿದ್ದೇನು?

ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಾ? KSRTC ಎಂ.ಡಿ ಹೇಳಿದ್ದೇನು?

ಬೆಂಗಳೂರು: ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರವಾಗಿ KSRTC ಎಂ.ಡಿ ಶಿವಯೋಗಿ ಕಳಸದ್ ಮಾತನಾಡಿದ್ದಾರೆ. ಈ ಬಗ್ಗೆ ನ್ಯೂಸ್​​ಫಸ್ಟ್​​ಗೆ  ಪ್ರತಿಕ್ರಿಯೆ ನೀಡಿರೋ ಅವರು, ಕೋವಿಡ್ ಮೊದಲ ಅಲೆ ಮುಕ್ತಾಯವಾದ ನಂತರ ಇದರ ಬಗ್ಗೆ ಚರ್ಚೆಯಾಗಿತ್ತು. ಆಗ ಬಿಎಂಟಿಸಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ನೀಡಿತ್ತು. ಉಳಿದ 3 ನಿಗಮಗಳು ಪ್ರಸ್ತಾವನೆ ಸಲ್ಲಿಸಿರಲಿಲ್ಲ ಎಂದರು.

ಆದರೆ ಈಗಿನ ಇಂಧನ ದರ ಏರಿಕೆಯನ್ನ ಗಮನದಲ್ಲಿಟ್ಟುಕೊಂಡು ಯೋಚಿಸಿದ್ರೆ, ಟಿಕೆಟ್ ದರ ಏರಿಕೆಗೆ ಖಂಡಿತ ಸರ್ಕಾರಕ್ಕೆ ಪ್ರಸ್ತಾವನೇ ಸಲ್ಲಿಸುವ ಅಗತ್ಯ ಬರುತ್ತೆ. ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ರು.

The post ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಾ? KSRTC ಎಂ.ಡಿ ಹೇಳಿದ್ದೇನು? appeared first on News First Kannada.

Source: newsfirstlive.com

Source link