ಬಾಗಲಕೋಟೆ: ಲಾಕ್ ಡೌನ್ ಸಮಯದಲ್ಲಿ ಸಾರಿಗೆ ಇಲಾಖೆ ನಷ್ಟದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್.. ಬಸ್ ಓಡಿಸದೇ ಹೋದ್ರೆ ಪ್ರತಿನಿತ್ಯ ನಮಗೆ ಆದಾಯದಲ್ಲಿ 20 ಕೋಟಿ ನಷ್ಟ ಉಂಟಾಗುತ್ತದೆ ಎಂದಿದ್ದಾರೆ.

ಒಂದು ತಿಂಗಳು ಬಸ್​ಗಳು ನಿಂತ್ರೆ ಆದಾಯದಲ್ಲಿ 500-600 ಕೋಟಿ ನಷ್ಟ ಆಗುತ್ತೆ. ಸಾರಿಗೆ ನಿಲ್ಲಿಸಿದ್ರೆ ಕೋವಿಡ್ ಚೈನ್ ಕಡಿತ ಮಾಡೋದ್ರಲ್ಲಿ ನಮ್ಮ ಕಾಣಿಕೆ ಇದೆ ಎನ್ನಬಹುದು.. ನಮಗೆ ನಷ್ಟವಾದ್ರೂ ಕೂಡಾ ಕೋವಿಡ್ ಹರಡದೇ ಇರುವಲ್ಲಿ ಸಾರಿಗೆಯದ್ದು ಅಳಿಲು ಸೇವೆ ಎನ್ನಬಹುದು.

ಕಳೆದ ಒಂದೂವರೆ ತಿಂಗಳಿನಿಂದ ನಾವು ಯಾವುದೇ ಬಸ್ ಸಂಚಾರ ಮಾಡ್ತಿಲ್ಲ.. ಮುಂದಿನ ಒಂದು ವಾರ ಕೂಡಾ ಸಂಚಾರ‌‌ ಇರಲ್ಲ. ಮುಂದೆ ಸರ್ಕಾರದ ಸೂಚನೆಯಂತೆ ಹಂತಹಂತವಾಗಿ ಸಾರಿಗೆ ನಡೆಸಲಿಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಒಟ್ಟಾರೆ‌ ನಷ್ಟವಂತೂ ಖಂಡಿತ ಇದೆ..

ನಷ್ಟ ತುಂಬಿಸಿಕೊಳ್ಳಲು ಪರ್ಯಾಯ ಯೋಚನೆ ಏನಾದ್ರು ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸಿ.. ಸಾರಿಗೆ ಸಂಸ್ಥೆ ಲಾಭ-ನಷ್ಟದ ರೀತಿಯಲ್ಲಿ ಕೆಲಸ ಮಾಡ್ತಿಲ್ಲ.. ಸಾಮಾಜಿಕ ಬದ್ಧತೆಯೊಂದಿಗೆ ಸಾರ್ವಜನಿಕರ ಉಪಯೋಗಕ್ಕೆ ಮಾಡ್ತಿದೀವಿ. ನಷ್ಟ ಇದ್ರೂ ಕೂಡಾ ಸರ್ಕಾರದ ಸಹಾಯಧನಕ್ಕಾಗಿ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಸಾರಿಗೆ ನೌಕರರಿಗೆ ವೇತನ ಕೊಡುವಂತಹ ಪ್ರಯತ್ನ ಆಗಿದೆ. ಏಪ್ರಿಲ್‌, ಮೇ ನಲ್ಲಿ ಈಗಾಗಲೇ ಪೂರ್ಣ ಪ್ರಮಾಣದ ಸಹಾಯಧನ ಕೊಡಲಾಗಿದೆ. ಜೂನ್ ತಿಂಗಳಲ್ಲಿ ಸಹಾಯಧನ ಕೊಡಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಸಂಚಾರ ಆರಂಭ ಆದ್ರೆ ಆದಾಯ ಹೆಚ್ಚಾದಲ್ಲಿ ಅನುಕೂಲ ಆಗಲಿದೆ. ಒಟ್ಟಾರೆ‌ ನಷ್ಟವಂತೂ ಖಂಡಿತ ಇದೆ. ಕಷ್ಟವನ್ನು ಸರಿದೂಗಿಸಲು ಸರ್ಕಾರವನ್ನು ಅವಲಂಬಿಸಬೇಕಾಗುತ್ತೆ ಅದನ್ನ ನಾವು ಮಾಡ್ತಿದೇವೆ ಎಂದು ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ.

ಸಾರಿಗೆ ಸಂಚಾರ ಪ್ರಾರಂಭ ಯಾವಾಗ..?
ಸಾಇರಿಗೆ ಸಂಚಾರ ಯಾವಾಗ ಪುನರಾರಂಭವಾಗುತ್ತೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಯೋಗಿ ಕಳಸದ್.. ಸಾರಿಗೆ ಓಡಿಸುವ ವಿಚಾರವಾಗಿ ಇನ್ನೂ ಸೂಚನೆ ಬಂದಿಲ್ಲ.. ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟದಲ್ಲಿ ಓಡಿಸುವ ಸಾಧ್ಯತೆ ಇದೆ. ತದನಂತರ ಜಿಲ್ಲೆಯಿಂದ ಜಿಲ್ಲೆಗೆ, ಕೊನೆಯದಾಗಿ ಅಂತಾರಾಜ್ಯಕ್ಕೆ ಮಾಡುವ ಸಾಧ್ಯತೆ ಇದೆ. ಮೊದಲಿಗೆ ಶೇ 20-25 ಬಸ್​ಗಳನ್ನು ಓಡಿಸಲಿಕ್ಕೆ ಸಾಧ್ಯ.. ತಿಂಗಳ ನಂತರ ಮತ್ತೆ ಶೇ 50 ರಷ್ಟು ಬಸ್​ಗಳು ಓಡಾಡಬಹುದು ಎಂದಿದ್ದಾರೆ.

ಪ್ರಯಾಣ ದರದಲ್ಲಿ ಏರಿಕೆ ಆಗುತ್ತಾ .?
ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು.. ಪ್ರಯಾಣದರದ ಬಗ್ಗೆ ಕಳೆದ 2020-21 ರಲ್ಲಿ ಮನವಿ ಮಾಡಿದಾಗ.. ಮೂರು ವಿಭಾಗಗಳಲ್ಲಿ ಶೇ.10 ರಷ್ಟು ಹೆಚ್ವಿಸಲು ಸರ್ಕಾರ ಅವಕಾಶ ನೀಡಿತ್ತು. ಆದ್ರೆ ಬೆಂಗಳೂರು‌ ಮಹಾನಗರ ವ್ಯಾಪ್ತಿಯಲ್ಲಿ ಬರುವುದಕ್ಕೆ ಪ್ರಯಾಣದರ ಹೆಚ್ಚಿಸಲು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಸರ್ಕಾರದ ಪರಿಶೀಲನೆ ಹಂತದಲ್ಲಿದೆ.. ನಷ್ಟದ ಪ್ರಮಾಣ ನೋಡಿದ್ರೆ ನಮಗೆ ಶೇ.50 ರಷ್ಟು ದರ ಏರಿಕೆ‌ ಆಗಬೇಕು, ಆದ್ರೆ ಅಷ್ಟು ಮಾಡೋಕೆ ಆಗಲ್ಲ. ಶೇ.10-15 ರಷ್ಟು ಮಾಡುವ ಸಾಧ್ಯತೆ ಇದೆ ಅಂತಾ ನಾನು ಅಂದುಕೊಂಡಿದ್ದೇವೆ.. ಅದು ಈಗ ಸರ್ಕಾರದ ಪರಿಶೀಲನೆ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.

The post ಬಸ್ ಪ್ರಯಾಣ ದರದಲ್ಲಿ ಶೇ.10-15 ರಷ್ಟು ಹೆಚ್ಚು ಮಾಡುವ ಸಾಧ್ಯತೆ ಇದೆ- ಶಿವಯೋಗಿ ಕಳಸದ್ appeared first on News First Kannada.

Source: newsfirstlive.com

Source link