ಬಸ್ ಮೇಲಿನ ಪುನೀತ್ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದ ಅಜ್ಜಿ ಹೇಳಿದ್ದೇನು? | Koppal Old women Talks about Puneeth Rajkumar


ಪುನೀತ್​ ರಾಜ್​ಕುಮಾರ್​ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಪುನೀತ್​ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಅಪ್ಪು ಅಗಲಿಕೆಯಿಂದ ಅನೇಕ ಹಿರಿಯ ಜೀವಗಳು ಮರುಗುತ್ತಿವೆ. ಅಪ್ಪು ಫೋಟೋ ಮುಂದೆ ಅಜ್ಜಿಯರು ಕಣ್ಣೀರು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ. ಬಸ್​ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಅಜ್ಜಿ ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.

‘ಪುನೀತ್​ ನಿಧನ ಹೊಂದಬಾರದಿತ್ತು. ಅವರೆಂದರೆ ನಂಗೆ ಬಹಳ ಪ್ರೀತಿ’ ಎಂದು ಅಜ್ಜಿ ಮಾಹಿತಿ ನೀಡಿದರು. ಅವರು ಹೇಳಿಕೊಂಡಿದ್ದೇನು? ಅಜ್ಜಿಯ ಊರು ಯಾವುದು ಎಂಬಿತ್ಯಾದಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಸ್​ ನಿಲ್ದಾಣದಲ್ಲಿ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *