ಮಂಗಳೂರು: ರಾಜ್ಯದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ದೂರದ ಬಹರೈನ್ ನಿಂದ ಮಂಗಳೂರಿಗೆ ಆಕ್ಸಿಜನ್ ಹಡಗಿನ ಮೂಲಕ ಬಂದಿದೆ.

ಬಹರೈನ್ ನ ಮನಾಮಾ ಬಂದರ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ನೌಕಾಪಡೆಯ ಐಎನ್‍ಎಸ್ ತಲ್ವಾರ್ ಹೆಸರಿನ ಹಡಗು ನವಮಂಗಳೂರು ಬಂದರ್ ಗೆ ಇಂದು ತಲುಪಿದೆ. ಎರಡು ಕ್ರಯೋಜೆನಿಕ್ ಐಸೋ ಕಂಟೇನರ್ ರನ್ನು ಹೊತ್ತು ತಂದ ಹಡಗಿನಿಂದ ಕಂಟೇನರನ್ನು ಇಳಿಸಲಾಗಿದ್ದು, ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿಡಲಾಗುತ್ತದೆ.

20 ಮೆಟ್ರಿಕ್ ಟನ್‍ನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಪೂರೈಕೆ ಮಾಡಲಾಗುವುದು, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್‍ನನ್ನು ರಾಜ್ಯದ ವಿವಿಧೆಡೆ ಅಗತ್ಯ ಇರುವಲ್ಲಿ ಸರಬರಾಜು ಮಾಡಲಾಗುವುದು. ಜೊತೆಗೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ತರಲಾಗಿದೆ.

ಭಾರತದೊಂದಿಗೆ ಬಹ್ರೈನ್ ರಾಷ್ಟ್ರ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದೆ.

The post ಬಹರೈನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಆಕ್ಸಿಜನ್ appeared first on Public TV.

Source: publictv.in

Source link