ಕರ್ನಾಟಕ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ನಿಕಿತಾ ಶಿವ್ ಅವರೊಂದಿಗೆ ಸ್ಪಿನ್ನರ್ ಶ್ರೇಯಸ್ ಹಸೆಮಣೆ ಏರಿದ್ದಾರೆ. ನಿನ್ನೆ ವಿವಾಹ ಸಮಾರಂಭ ನಡೆದಿದ್ದು, ಈ ವಿಚಾರವನ್ನ ಸ್ವತಃ ಶ್ರೇಯಸ್ ಗೋಪಾಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸಮಾರಂಭದ ಪೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಕಳೆದ ಮೇನಲ್ಲೇ ಶ್ರೇಯಸ್ ಗೋಪಾಲ್ ಜೊತೆಗಿನ ಫೋಟೋವನ್ನ ನಿಖಿತಾ ಶಿವ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ರು. ಆಗ ಎಂಗೇಜ್ಮೆಂಟ್ ಆದ ಬಗ್ಗೆ ಸುದ್ದಿಗಳು ಹರಿದಾಡ್ತಿದ್ವು. ಇಂಜಿನಿಯರ್ ಪದವಿಧರೆಯಾಗಿರುವ ನಿಖಿತಾ, ಮಾನಾ ನೆಟ್ವರ್ಕ್ ಎಂಬ ಸಂಸ್ಥೆಯನ್ನ ಮುನ್ನಡೆಸುತ್ತಿದ್ದು, ಲೂಯಿಸ್ ಫಿಲಿಫ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.
24.11.2021 ♥️@NikithaShiv pic.twitter.com/QQa5uEZ8Zb
— Shreyas Gopal (@ShreyasGopal19) November 25, 2021