ಬಹುಕಾಲದ ಗೆಳತಿ ಅಂಜುಂ ಖಾನ್​​ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ

ಬಹುಕಾಲದ ಗೆಳತಿ ಅಂಜುಂ ಖಾನ್​​ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ

ಟೀಮ್​ ಇಂಡಿಯಾ ಆಲ್​ರೌಂಡರ್ ಶಿವಂ ದುಬೆ, ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಅಂಜುಂ ಖಾನ್ ಅವರನ್ನು ದುಬೆ ಶುಕ್ರವಾರ ಅಂದರೆ ಜುಲೈ 16ರಂದು ವರಿಸಿದ್ದಾರೆ. ತಮ್ಮ ವಿವಾಹ ಆಗಿರುವ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಬಹುಕಾಲದಿಂದ ಪ್ರೀತಿಸುತ್ತಿದ್ದ ಈ ಜೋಡಿ, ಹಿಂದು ಮತ್ತು ಮುಸ್ಲಿಂ ಸಂಪ್ರದಾಯದಂತೆ ಹಸಮಣೆ ಏರಿದ್ದಾರೆ. ಮುಂಬೈನಲ್ಲಿ ನಡೆದ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಈ ನವ ಜೋಡಿಗೆ ಹಾಲಿ, ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. 28 ವರ್ಷದ ದುಬೆ 13 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 21 ಐಪಿಎಲ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ಪರ ಆಡುತ್ತಿದ್ದಾರೆ.

 

View this post on Instagram

 

A post shared by shivam dube (@dubeshivam)

The post ಬಹುಕಾಲದ ಗೆಳತಿ ಅಂಜುಂ ಖಾನ್​​ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ appeared first on News First Kannada.

Source: newsfirstlive.com

Source link