ಬಹುದಿನಗಳ ಕನಸನ್ನ ಇಂದು ನನಸು ಮಾಡಿಕೊಂಡ ‘ನಾದಬ್ರಹ್ಮ’ ಹಂಸಲೇಖ

ಬಹುದಿನಗಳ ಕನಸನ್ನ ಇಂದು ನನಸು ಮಾಡಿಕೊಂಡ ‘ನಾದಬ್ರಹ್ಮ’ ಹಂಸಲೇಖ

ನಾದಬ್ರಹ್ಮ ಹಂಸಲೇಖ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಅಂದರೆ ಇಂದು ಬಹುದಿನಗಳ ಕನಸನ್ನ ಈಡೇರಿಸಿಕೊಂಡಿದ್ದಾರೆ.

ಹಂಸಲೇಖ ಅವರು ಬಹುದಿನಗಳಿಂದ ಕನ್ನಡದ ಪುಸ್ತಕಗಳಿಗಾಗಿ ಲೈಬ್ರರಿ ತೆರೆಯಬೇಕು ಎಂದುಕೊಂಡಿದ್ದರು. ಇಂದು ಹಂಸಲೇಖ ಅವರ 70ನೇ ಜನ್ಮದಿನ ಆಗಿರೋದ್ರಿಂದ ‘ಶಾರದ ಪುಸ್ತಕಾಲಯ’ವನ್ನ ತಮ್ಮ ನಿವಾಸದಲ್ಲಿ ತೆರೆದಿದ್ದಾರೆ.

ಶಾರದ ಅನ್ನೋರು ಹಂಸಲೇಖ ಅವರ ಅತ್ತೆ. ಹಂಸಲೇಖ ಅವರ ಸಾಹಿತ್ಯವನ್ನ ಮೊದ ಮೊದಲು ಹೆಚ್ಚೆಚು ಪ್ರೋತ್ಸಾಹಿಸಿದ್ದೇ ಈ ಶಾರದಮ್ಮನವರು. ಈ ಕಾರಣಕ್ಕೆ ಅವರ ಹೆಸರಿನಲ್ಲಿ ವಿಶೇಷವಾದ ಗ್ರಂಥಾಲಯವನ್ನ ತೆರೆದಿದ್ದಾರೆ. ಟೋಟಲ್ ಕನ್ನಡದವರ ಸಹಯೋಗದಲ್ಲಿ ಶಾರದ ಪುಸ್ತಕಾಲಯ ಇಂದು ಓಪನ್ ಆಗಿದೆ.

The post ಬಹುದಿನಗಳ ಕನಸನ್ನ ಇಂದು ನನಸು ಮಾಡಿಕೊಂಡ ‘ನಾದಬ್ರಹ್ಮ’ ಹಂಸಲೇಖ appeared first on News First Kannada.

Source: newsfirstlive.com

Source link