ಬಹುನಿರೀಕ್ಷಿತ ‘ಪುಷ್ಪ’ ಪ್ರೀ ರಿಲೀಸ್​ ಇವೆಂಟ್​ಗೆ ಯಾವ್ಯಾವ ಸ್ಟಾರ್ಸ್​ ಬರಲಿದ್ದಾರೆ ಗೊತ್ತಾ?


ಅಲ್ಲು ಅರ್ಜುನ್​ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಷ್ಪ’. ಈ ಸಿನಿಮಾದ ಟೀಸರ್​, ಹಾಡುಗಳು, ಸಾಕಷ್ಟು ಸದ್ದು ಮಾಡುತ್ತಿವೆ. ಪುಷ್ಪ ಸಿನಿಮಾ ಇದೇ ತಿಂಗಳು 17 ನೇ ತಾರೀಖು ಕನ್ನಡ ಸೇರಿ 5 ಭಾಷೆಗಳಲ್ಲಿ ಏಕ ಕಾಲದಲ್ಲಿ ಒಟ್ಟಿಗೆ ರಿಲೀಸ್ ಆಗುತ್ತಿದೆ. ಈ ಮಧ್ಯೆ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ಬಗ್ಗೆ ದೊಡ್ಡ ಯಾವೆಲ್ಲ ಸೆಲಿಬ್ರಿಟಿಗಳು ಬರ್ತಾರೆ ಅಂತ ದೊಡ್ಡ ಚರ್ಚೆಯೇ ಪ್ರಾರಂಭವಾಗಿದೆ.

‘ಪುಷ್ಪ’ ಸಿನಿಮಾದ ನಿರ್ಮಾಪಕರಾದ ಅಲ್ಲು ಅರವಿಂದ್ ನೀಡಿರೋ ಮಾಹಿತಿ ಪ್ರಕಾರ, ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ‘ಬಾಹುಬಲಿ’ ಸ್ಟಾರ್​ ಪ್ರಭಾಸ್​ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಗೆ ಸಾಥ್​ ನೀಡಲು ಬಾಲಿವುಡ್​ ‘ಕಬೀರ್​ ಸಿಂಗ್’ ಖ್ಯಾತಿಯ​ ಶಾಹೀದ್​ ಕಪೂರ್​ ಕೂಡ ಆಗಮಿಸಲಿದ್ದಾರೆ. ಶಾಹಿದ್​ ಕಪೂರ್​ ಅಲ್ಲು ಅರವಿಂದ್​ ನಿರ್ಮಾಣದ ಹಿಂದಿ ‘ಜೆರ್ಸಿ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಬಾಲಿವುಡ್​ನಿಂದ ಶಾಹಿದ್​ ಪುಷ್ಪನಿಗೆ ಸಾಥ್​ ನೀಡಲಿದ್ದಾರೆ.
ಇವರಿಬ್ಬರು ಮಾತ್ರ ಅಲ್ಲದೆ ಟಾಲಿವುಡ್​ನ ಎವರ್​ಗ್ರೀನ್​ ಎನರ್ಜಿಟಿಕ್​ ಹೀರೋ ನಂದ ಮೂರಿ ಬಾಲಕೃಷ್ಣ ಕೂಡ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ಗೆ ಆಗಮಿಸಲಿದ್ದಾರೆ. ಹೀಗಾಗಿ ’ಪುಷ್ಪ’ನಿಗಾಗಿ ತ್ರಿವಳಿ ಸ್ಟಾರ್​ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಪುಷ್ಪ ಸಿನಿಮಾಗೆ ಸುಕುಮಾರ್ ಆ್ಯಕ್ಷನ್​ ಕಟ್​ ಹೇಳಿದ್ದು, ‘ಆರ್ಯ’, ‘ಆರ್ಯ-2’ ಸಿನಿಮಾಗಳ ನಂತರ ಮೂರನೇ ಬಾರಿ ಹ್ಯಾಟ್ರಿಕ್ ಹೊಡೆಯಲು ಸ್ಟಾರ್​ ಜೋಡಿ ಸಿದ್ಧವಾಗಿದೆ.

News First Live Kannada


Leave a Reply

Your email address will not be published. Required fields are marked *