ಬೆಂಗಳೂರು: ಇತ್ತೀಚೆಗೆ ನಗರದ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಚಾರ್ಜ್​ಶೀಟ್ ಸಲ್ಲಿಸಿದ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಬಹುಮಾನ ಘೋಷಿಸಿದ್ದಾರೆ.

ಕೇವಲ ಐದು ವಾರಗಳಲ್ಲಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಚಾರ್ಜ್​ಶೀಟ್ ಸಲ್ಲಿಸಿದ ಪೋಲಿಸ್​ ತಂಡಕ್ಕೆ 1ಲಕ್ಷ ರೂಗಳ ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಘೋಷಿಸಿದ್ದಾರೆ. ಪೂರ್ವ ವಿಭಾಗ ಡಿಸಿಪಿ ಎಸ್. ಡಿ. ಶರಣಪ್ಪ ನೇತೃತ್ವದಲ್ಲಿ ಕೇವಲ ಐದು ವಾರಗಳಲ್ಲಿ ಪ್ರಕರಣವನ್ನು ಮಿಂಚಿನ ವೇಗದಲ್ಲಿ ಪೊಲೀಸರು ಭೇದಿಸಿದ್ದರು.

The post ಬಾಂಗ್ಲಾ ಯುವತಿ ಅತ್ಯಾಚಾರ ಕೇಸ್: ಪೊಲೀಸರಿಗೆ ₹1 ಲಕ್ಷ ಬಹುಮಾನ ಘೋಷಣೆ appeared first on News First Kannada.

Source: newsfirstlive.com

Source link