ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಬಾಂಗ್ಲಾದೇಶದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶೊಬೂಜ್ ಮೇಲೆ ಫೈರಿಂಗ್ ನಡೆದಿದೆ. ಆವಲಹಳ್ಳಿಯ ರಾಂಪುರ ಕೆರೆ ಬಳಿ  ಪೊಲೀಸರು ಶೊಬೂಜ್​ನ ಕಾಲಿಗೆ ಗುಂಡುಹಾರಿಸಿ ಅರೆಸ್ಟ್​ ಮಾಡಿದ್ದಾರೆ.

ಇಂದು ಬೆಳಗಿನ ಜಾವ ಅರೋಪಿಯ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಶೊಬೂಜ್ ಪರಾರಿಯಾಗಲು ಯತ್ನಿಸಿದ ಎನ್ನಲಾಗಿದೆ. ಆಗ ಪಿಎಸ್​​ಐ ಶಿವರಾಜ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅರೋಪಿಯನ್ನ ವಶಕ್ಕೆ ಪಡೆಯಲು ಪ್ರಯತ್ನಿಸಿದರು. ಆದ್ರೆ ಆರೋಪಿ ಪೊಲೀಸರ ಮೇಲೆ ಬಟನ್ ಚಾಕುವಿನಿಂದ  ಹಲ್ಲೆ ಮಾಡಿದ್ದಾನೆ. ಈ ವೇಳೆ ಪಿಎಸ್​​ಐ ಶಿವರಾಜ್ ಮತ್ತು ಹೆಡ್ ಕಾನ್ಸ್​​ಟೇಬಲ್ ದೇವೆಂದ್ರ ನಾಯಕ್ ಅವರಿಗೆ ಗಾಯವಾಗಿದೆ.

ನಂತರ ಪಿಎಸ್​​ಐ ಶಿವರಾಜ್ ಅರೋಪಿ ಶೂಬೂಜ್​ನ ಎಡಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

 

The post ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ appeared first on News First Kannada.

Source: newsfirstlive.com

Source link