ಬೆಂಗಳೂರು: ಬಾಂಗ್ಲಾದೇಶದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಾಷ್ಟ್ರೀಯ ತನಿಖಾ ತಂಡ ಪ್ರತ್ಯೇಕವಾಗಿ ಎಫ್‍ಐಆರ್ ದಾಖಲು ಮಾಡಿಕೊಂಡು ತನಿಖೆ ಕೈಗೆತ್ತಿಕೊಂಡಿದೆ.

ಈ ಪ್ರಕರಣದಲ್ಲಿ ಈಗಾಗಲೇ ಎಲ್ಲಾ ಆರೋಪಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ ಅಲ್ಲದೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ.  ಇದನ್ನೂ ಓದಿ: ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

ಆರೋಪಿಗಳು ಸೇರಿದಂತೆ ಯುವತಿಯೂ ಕೂಡ ಅಕ್ರಮವಾಗಿ ವಲಸೆ ಬಂದ ಹಿನ್ನೆಲೆಯಲ್ಲಿ ಈಗ ಎಫ್‍ಐಆರ್ ದಾಖಲಾಗಿದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ತನಿಖೆ ಪ್ರಾರಂಭವಾಗಿದ್ದು, ಆರೋಪಿಗಳು ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಪರ್ಕ ಇದ್ಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

The post ಬಾಂಗ್ಲಾ ಯುವತಿ ಮೇಲೆ ರೇಪ್ – ಎನ್‍ಐಎಯಿಂದ ಪ್ರತ್ಯೇಕ ಎಫ್‍ಐಆರ್ appeared first on Public TV.

Source: publictv.in

Source link