ಬಾಂಗ್ಲಾ ಯುವತಿ ರೇಪ್‌ ಕೇಸ್‌; ಆರೋಪಿಗಳ ಮೊಬೈಲ್​​ನಲ್ಲಿ 1,200ಕ್ಕೂ ಹೆಚ್ಚು ಅರೆನಗ್ನ ಪಾರ್ಟಿ ವಿಡಿಯೋ

ಬಾಂಗ್ಲಾ ಯುವತಿ ರೇಪ್‌ ಕೇಸ್‌; ಆರೋಪಿಗಳ ಮೊಬೈಲ್​​ನಲ್ಲಿ 1,200ಕ್ಕೂ ಹೆಚ್ಚು ಅರೆನಗ್ನ ಪಾರ್ಟಿ ವಿಡಿಯೋ

ಬೆಂಗಳೂರು: ನಗರದಲ್ಲಿ 24 ವರ್ಷದ ಬಾಂಗ್ಲಾ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಂಧಿತ ಆರೋಪಿಗಳ ಮೊಬೈಲ್​​​​ನಲ್ಲಿ 1,200ಕ್ಕೂ ಹೆಚ್ಚು ಅರೆನಗ್ನ ಪಾರ್ಟಿ ವಿಡಿಯೋಗಳು ಲಭ್ಯವಾಗಿದೆ ಎಂಬ ಮಾಹಿತಿ ಲಭಿಸಿದೆ.

ಪ್ರಕರಣದ ಆರೋಪಿತ ಕಾಮುಕರ ಮೊಬೈಲ್​​ಗಳಲ್ಲಿ ಬಾಂಗ್ಲಾ ಗ್ಯಾಂಗ್​​​ನ ಅರೆ ನಗ್ನ ಪಾರ್ಟಿ  ವಿಡಿಯೋ‌ಗಳು ಸಿಕ್ಕಿವೆ. ಈ ಗ್ಯಾಂಗ್​​ ಯುವತಿಯರೊಂದಿಗೆ ಕಂಠಪೂರ್ತಿ ಕುಡಿದು ಅರೆ ನಗ್ನ ಪಾರ್ಟಿ ಮಾಡುತ್ತಿತ್ತು. ಮೋಜು ಮಸ್ತಿಯನ್ನ ವಿಡಿಯೋ ಮಾಡಿಕೊಳ್ಳುತ್ತಿದ್ದ ಖಯಾಲಿ ಈ ಗ್ಯಾಂಗ್​​​ಗೆ ಇತ್ತು ಎನ್ನಲಾಗಿದೆ.

ರಾಮಮೂರ್ತಿ ನಗರ ಪೊಲೀಸರು ಪ್ರಕರಣದ ಸಂಬಂಧ ಸುಮಾರು 13 ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಬಂಧನದ ಆರೋಪಿಗಳಿಂದ ಮೊಬೈಲ್​​ಗಳನ್ನು ವಶಕ್ಕೆ ಪಡೆದಿದ್ದು, ಈ ಮೊಬೈಲ್​​ಗಳಲ್ಲಿ ವಿಡಿಯೋ ಪತ್ತೆಯಾಗಿದೆ. ಸದ್ಯ ಪೊಲೀಸರು ಮೊಬೈಲ್​​ಗಳನ್ನು ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಗ್ಯಾಂಗ್​ನಿಂದ ಕೇರಳದಲ್ಲೂ ಸ್ಪಾ ಕೇಂದ್ರ.. ಗ್ಯಾಂಗ್ ರೇಪ್​​ & ಟಾರ್ಚರ್​​ಗೆ ಕಾರಣ ಇದೇ

The post ಬಾಂಗ್ಲಾ ಯುವತಿ ರೇಪ್‌ ಕೇಸ್‌; ಆರೋಪಿಗಳ ಮೊಬೈಲ್​​ನಲ್ಲಿ 1,200ಕ್ಕೂ ಹೆಚ್ಚು ಅರೆನಗ್ನ ಪಾರ್ಟಿ ವಿಡಿಯೋ appeared first on News First Kannada.

Source: newsfirstlive.com

Source link