ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಪ್ರತ್ಯೇಕ ಎಫ್ಐಆರ್​ನ್ನ ದಾಖಲಿಸಿಕೊಂಡಿದೆ. ಅಲ್ಲದೇ ಪ್ರಕರಣದ ಆರೋಪಿಗಳನ್ನ ಬಾಡಿ ವಾರೆಂಟ್ ಮೇರೆಗೆ ಶೀಘ್ರದಲ್ಲೇ ಎನ್ಐಎ ವಶಕ್ಕೆ ನೀಡಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ಯುವತಿಯ ಗ್ಯಾಂಗ್​ ರೇಪ್​; ಪ್ರತ್ಯೇಕ ಎಫ್​​ಐಆರ್​​ ದಾಖಲಿಸಿದ ರಾಷ್ಟ್ರೀಯ ತನಿಖಾ ದಳ

ಮೇ 27ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹೀಗಾಗಿ ಪ್ರಕರಣದ 10 ಆರೋಪಿಗಳನ್ನ ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು. ಅಲ್ಲದೇ ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಮೂಲದ ಯುವತಿಯರನ್ನ ಪೊಲೀಸರು ರಕ್ಷಿಸಿದ್ದರು. ನಕಲಿ ಭಾರತೀಯ ದಾಖಲೆಗಳ ಸಹಿತ ಯುವತಿಯರನ್ನ ಪೊಲೀಸ್ರು ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣವನ್ನ ಹೆಣ್ಣೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವತಿಯರನ್ನ ಬೆಂಗಳೂರಿಗೆ ಕರೆತಂದಿದ್ದ ಹಿನ್ನೆಲೆ ಎನ್​ಐಎ ತಂಡ ಅಧಿಕೃತವಾಗಿ ಎಫ್ಐಆರ್ ದಾಖಲಿಸಿಕೊಂಡಿದೆ.

ಇದನ್ನೂ ಓದಿ: ಬಾಂಗ್ಲಾಕೇಸ್ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್; ಆರೋಪಿಗಳು ಬಾಯ್ಬಿಟ್ಟ ಸತ್ಯವೇನು..?

The post ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಎನ್​ಐಎಯಿಂದ ಪ್ರತ್ಯೇಕ FIR ದಾಖಲು appeared first on News First Kannada.

Source: newsfirstlive.com

Source link