ಬೆಂಗಳೂರು: ಮೇ 27 ರಂದು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾಂಗ್ ರೇಪ್ ಕೇಸ್; ಅಕ್ರಮವಾಗಿ ಬಾಂಗ್ಲಾದಿಂದ ಬಂದಿದ್ದ ರಾಕ್ಷಸರು

ನಗರದ ಒಂದನೇ ACMM ಕೋರ್ಟ್​ಗೆ 12 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬರೋಬ್ಬರಿ 1019ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಾಕ್ಷ್ಯಾಧಾರ ಸಹಿತ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ಗ್ಯಾಂಗ್​ನಿಂದ ಕೇರಳದಲ್ಲೂ ಸ್ಪಾ ಕೇಂದ್ರ.. ಗ್ಯಾಂಗ್ ರೇಪ್​​ & ಟಾರ್ಚರ್​​ಗೆ ಕಾರಣ ಇದೇ

ಕಳೆದ ಐದು ವಾರಗಳ ಹಿಂದೆ ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಲ್ಲದೇ ಮರ್ಮಾಂಗಕ್ಕೆ ಮದ್ಯದ ಬಾಟಲ್​ ಇಟ್ಟು ವಿಕೃತ ಕಾಮಿಗಳು ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಜಾಡು ಹಿಡಿದು ಹೊರಟಿರುವ ಪೊಲೀಸರು ಇಂದು 12 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪೈಶಾಚಿಕ ಕೃತ್ಯ ನಡೆಸಿದ ಆರೋಪಿಗಳ ಮೇಲೆ FIR, ಕೇರಳದಲ್ಲಿದ್ದ ಕಾಮುಕರೂ ಅರೆಸ್ಟ್

ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​​ರೇಪ್​ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್
ಇದನ್ನೂ ಓದಿ: ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ: ಗ್ಯಾಂಗ್ ರೇಪ್ ಮಾಡಿ ವಿಕೃತಿ ಮೆರೆದ ಕಾಮುಕರು

The post ಬಾಂಗ್ಲಾ ರಾಕ್ಷಸರಿಂದ ಗ್ಯಾಂಗ್​ ರೇಪ್​: 12 ಆರೋಪಿಗಳ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಕೆ    appeared first on News First Kannada.

Source: newsfirstlive.com

Source link