ನವದೆಹಲಿ: ಅಪ್ರಾಪ್ತ ವಯಸ್ಸಿನವರು ಅಸಭ್ಯವಾಗಿ ವರ್ತಿಸುವ ದೃಶ್ಯಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ವೆಬ್ ಸರಣಿಯಾದ ‘ಬಾಂಬೆ ಬೇಗಮ್ಸ್’ ಅನ್ನು  OTT ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ ಪ್ರಸಾರ ಮಾಡಬಾರದು ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ರಾಷ್ಟ್ರೀಯ ಆಯೋಗ NCPCR  ನಿರ್ದೇಶನ ನೀಡಿದೆ.

ಈ ಕುರಿತಾಗಿ ನೆಟ್ ಫ್ಲಿಕ್ಸ್ ಗೆ ನೋಟಿಸ್ ನೀಡಿರುವ NCPCR ಬಾಂಬೆ ಬೇಗಮ್ ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಬೇಕು ಎಂದಿದೆ. ಈ ಕುರಿತು ಮಾಹಿತಿ ನೀಡಿರುವ NCPCR ಅಧ್ಯಕ್ಷರಾದ ಪ್ರಿಯಾಂಕ್ ಕನಂಗೊ, ಈ ವೆಬ್ ಸರಣಿಯಲ್ಲಿ  ಅಪ್ರಾಪ್ತ ವಯಸ್ಸಿನವರು ಅಸಭ್ಯವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದು, ಈ ಸರಣಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಲು ನಾವು ನಿರ್ದೇಶನ ನೀಡಿದ್ದೇವೆ ಎಂದಿದ್ದಾರೆ.

ಈ ನಿರ್ಧಾರದ ಕುರಿತು ಮಾಹಿತಿ ನೀಡಿರುವ ಆಯೋಗ ನಾವು 2 ಜನ ಟ್ವೀಟರ್ ಖಾತೆಯನ್ನು ನಿರ್ವಹಣೆ ಮಾಡುವವರಿಂದ ದೂರನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಗುಣಮಟ್ಟದ ಶಿಕ್ಷಣಕ್ಕೆ ಎಸ್‌.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ ಹೆಸರುವಾಸಿ: ಚಂದ್ರಹಾಸ್‌ ಶೆಟ್ಟಿ

ಈ  ದೂರುಗಳ ಕುರಿತಾಗಿಯೂ ಆಯೋಗ ಮಾಹಿತಿ ನೀಡಿದ್ದು, ಮೊದಲ ದೂರಿನ ಅನ್ವಯ  ಈ ಸರಣಿಯಲ್ಲಿ ಅಪ್ರಾಪ್ತೆಯೊಬ್ಬಳು ಅಮಲಿನ ಪದಾರ್ಥಗಳಿಗೆ ದಾಸಳಾಗಿರುವುದನ್ನು ಚಿತ್ರಿಸಲಾಗಿದೆ. ಆಕೆ ಪಾರ್ಟಿಗಳಿಗೆ ತೆರಳಿದಾಗಲೂ ಅಮಲಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವ ದೃಶ್ಯಗಳನ್ನು ಇದು ಒಳಗೊಂಡಿದೆ ಎಂದಿದ್ದಾರೆ.

ಈ ನಡುವೆ ಇನ್ನೊಂದು ದೂರಿನ ಕುರಿತಾಗಿಯೂ ಆಯೋಗ ಮಾಹಿತಿ ನೀಡಿದ್ದು, ಈ ಸರಣಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಲಿದೆ ಎಂದಿರುವ NCPCR ಈ ರೀತಿಯಾದ ಮಾಹಿತಿಗಳನ್ನು ಒಳಗೊಂಡಿರುವ ಸರಣಿಯಿಂದ ಕೇವಲ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಮಾತ್ರ ಬೀರದೆ ಜೊತೆ ಜೊತೆಗೆ ಇದು ದುಷ್ಕರ್ಮಿಗಳಿಂದ ಮಕ್ಕಳ ಮೇಲೆ ಶೋಷಣೆ ಆಗಲು ಕಾರಣವಾಗಬಹುದು ಎಂದಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More