ಬಾಕಿ ಇರುವ ಸೆಮಿಸ್ಟರ್ ಎಕ್ಸಾಮ್ಸ್​ ಡೇಟ್​​ ಅನೌನ್ಸ್​ ಮಾಡಿದ ಬೆಂಗಳೂರು ಸಿಟಿ ಯೂನಿವರ್ಸಿಟಿ

ಬಾಕಿ ಇರುವ ಸೆಮಿಸ್ಟರ್ ಎಕ್ಸಾಮ್ಸ್​ ಡೇಟ್​​ ಅನೌನ್ಸ್​ ಮಾಡಿದ ಬೆಂಗಳೂರು ಸಿಟಿ ಯೂನಿವರ್ಸಿಟಿ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವೂ ಪರೀಕ್ಷೆ ದಿನಾಂಕ ಪ್ರಕಟ ಮಾಡಿದೆ. ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ಡಿಗ್ರೀ ಎಕ್ಸಾಂ ಆಗಸ್ಟ್​​ 10ನೇ ತಾರೀಖಿನಿಂದ ಆರಂಭವಾಗಲಿದೆ.

ಇನ್ನು, ಪೆಂಡಿಂಗ್​​ ಇರುವ ಎಲ್ಲಾ ಪದವಿ ಪರೀಕ್ಷೆಗಳನ್ನು ಆಗಸ್ಟ್​​ 10ರಿಂದ 31ರೊಳಗೆ ನಡೆಸಲು ಆದೇಶಿಸಲಾಗಿದೆ. ಆಗಸ್ಟ್​ 28ನೇ ತಾರೀಕಿನಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುರುವಾಗಲಿದೆ. ಬಳಿಕ ಸೆಪ್ಟೆಂಬರ್​​ 20ರೊಳಗೆ ಫಲಿತಾಂಶ ಪ್ರಕಟಿಸಿ ಸ್ನಾತಕೋತ್ತರ ಪದವಿಗೆ ಅನುವು ಮಾಡಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಆಂತರಿಕ ಹಾಗೂ ಹಿಂದಿನ ಸೆಮಿಸ್ಟರ್ ಅಂಕಗಳು ಆಧರಿಸಿ ಸ್ನಾತಕೋತ್ತರ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗಿದೆ. ಅಂತಿಮ ಸ್ನಾತಕೋತ್ತರ ಪರೀಕ್ಷೆ ಆಗಸ್ಟ್ 2ನೇ ವಾರದಲ್ಲಿ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಕೇಂದ್ರ ವಿವಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

The post ಬಾಕಿ ಇರುವ ಸೆಮಿಸ್ಟರ್ ಎಕ್ಸಾಮ್ಸ್​ ಡೇಟ್​​ ಅನೌನ್ಸ್​ ಮಾಡಿದ ಬೆಂಗಳೂರು ಸಿಟಿ ಯೂನಿವರ್ಸಿಟಿ appeared first on News First Kannada.

Source: newsfirstlive.com

Source link