ಬೆಳಗಾವಿ: ಬಾಕಿ ಬಿಲ್ ನೀಡಿಲ್ಲ ಎಂದು ನಿವೃತ್ತ ಯೋಧನ ಮೃತದೇಹ ನೀಡದೇ ಖಾಸಗಿ ಆಸ್ಪತ್ರೆ ಸಿಬ್ಬಂದಿ ಸರ್ಕಾರದ ನಿಯಮವನ್ನ ಗಾಳಿಗೆ ತೂರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೀಗಾಗಿ ಕೋವಿಡ್‌ನಿಂದ ಮೃತಪಟ್ಟ ನಿವೃತ್ತ ಯೋಧನ ಮೃತದೇಹ ಪಡೆಯಲು ಕುಟುಂಬಸ್ಥರ ಪರದಾಡಬೇಕಾಯ್ತು ಎನ್ನಲಾಗಿದೆ.

ಬಿಜೆಪಿ ಮುಖಂಡ ಡಾ.ರವಿ ಪಾಟೀಲ್‌ಗೆ ಸೇರಿದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಮೃತ ನಿವೃತ್ತ ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ 23 ದಿನಗಳ ಹಿಂದೆ ಕೋವಿಡ್‌‌ನಿಂದ ಆಸ್ಪತ್ರೆ ಸೇರಿದ್ದ ನಿವೃತ್ತ ಯೋಧ ರಾಜೇಂದ್ರ ಮೆಣಸೆ ಅವರಿಗೆ ಅಂದಿನಿಂದ ಇಂದಿನವರೆಗೆ ಯಾವ ರೀತಿಯ ಚಿಕಿತ್ಸೆ ನೀಡ್ತಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.

ನಿನ್ನೆ ರಾತ್ರಿ 2 ಗಂಟೆಗೆ ರಾಜೇಂದ್ರ ಮೆಣಸೆ ಮೃತಪಟ್ಟಿದ್ದು ಈ ವಿಚಾರವನ್ನ ಬೆಳಗ್ಗೆ 10 ಗಂಟೆಗೆ ತಿಳಿಸಿದ್ದಾರೆ. ಈಗಾಗಲೇ 3 ಲಕ್ಷದ 10 ಸಾವಿರ ಹಣ ಪಾವತಿಸಿದ್ದು ಮತ್ತೆ 3 ಲಕ್ಷದ 63 ಸಾವಿರ ಪಾವತಿಸಲು ಹೇಳ್ತಿದ್ದಾರೆ. ದುಡ್ಡುಕೊಡಿ ಆಮೇಲೆ ಮೃತದೇಹ ಕೊಡ್ತೀವಿ ಎನ್ನುತ್ತಿದ್ದಾರೆ. ದೇಶಸೇವೆ ಮಾಡಿದ ಯೋಧನಿಗೆ ಈ ರೀತಿ ಪರಿಸ್ಥಿತಿ ಆದ್ರೆ ಹೇಗೆ ಎಂದು ನಿವೃತ್ತ ಯೋಧನ ಸ್ನೇಹಿತರು ಕಿಡಿಕಾರಿದ್ದಾರೆ. ಅಲ್ಲದೇ ಆಸ್ಪತ್ರೆಯ ಎದುರು ಭಾರತ್ ಮಾತಾ ಕೀ ಜೈ ಅಂತಾ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಾಧ್ಯಮಗಳ ಕ್ಯಾಮೆರಾ ನೋಡಿದ ಕೂಡಲೇ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಮೃತದೇಹ ಕೊಟ್ಟಿದ್ದಾರೆ.

The post ಬಾಕಿ ಬಿಲ್ ಕಟ್ಟಿಲ್ಲವೆಂದು ಮಾಜಿ ಯೋಧನ ಮೃತದೇಹ ನೀಡಲು ನಿರಾಕರಿಸಿದ ಆಸ್ಪತ್ರೆ appeared first on News First Kannada.

Source: newsfirstlive.com

Source link