ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ಸಿನಿಮಾಗಳ ಪೈಪೋಟಿ; ಈ ವಾರ ಬಾಲಿವುಡ್​ ಮಂದಿ ಎದುರು ‘ಸಖತ್​’​ ಮುಖಾಮುಖಿ | Sakath Antim The Final Truth Satyameva Jayate 2 movies Box office clash

ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ಸಿನಿಮಾಗಳ ಪೈಪೋಟಿ; ಈ ವಾರ ಬಾಲಿವುಡ್​ ಮಂದಿ ಎದುರು ‘ಸಖತ್​’​ ಮುಖಾಮುಖಿ

ಸತ್ಯಮೇವ ಜಯತೆ 2, ಸಖತ್​, ಅಂತಿಮ್​: ದಿ ಫೈನಲ್​ ಟ್ರುತ್

ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗ ಈಗ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡಿದೆ. ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಬಿಡುಗಡೆಗಾಗಿ ಕಾದು ಕುಳಿತಿದ್ದ ಅನೇಕ ಚಿತ್ರಗಳ ನಡುವೆ ಈಗ ಕ್ಲ್ಯಾಶ್​ ಕೂಡ ಆಗುತ್ತಿದೆ. ಇದರಿಂದ ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ನಟರ ನಡುವೆ ಭಾರಿ ಪೈಪೋಟಿ ಏರ್ಪಡುತ್ತಿದೆ. ಯಾವ ಚಿತ್ರ ಎಷ್ಟು ಚಿತ್ರಮಂದಿರ ಪಡೆದುಕೊಂಡಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಥಿಯೇಟರ್​ಗಾಗಿ ಸ್ಟಾರ್​ ನಟರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ವಾರ (ನ.26) ಬಹುನಿರೀಕ್ಷಿತ ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿ ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ನಟನೆಯ ‘ಸಖತ್​’ (Sakath Kannada Movie) ಬಿಡುಗಡೆ ಆಗಿದೆ. ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ಅಭಿನಯದ ‘ಅಂತಿಮ್​: ದಿ ಫೈನಲ್​ ಟ್ರುತ್​’ (Antim The Final Truth) ರಿಲೀಸ್​ ಆಗಿದೆ. ಅವರಿಗೆ ಪೈಪೋಟಿ ನೀಡಲು ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ 2’ (Satyameva Jayate 2) ಕೂಡ ತೆರೆಕಂಡಿದೆ.

 

ಗಣೇಶ್​ ‘ಸಖತ್​’ ಎಂಟ್ರಿ

ನಿರ್ದೇಶಕ ಸಿಂಪಲ್​ ಸುನಿ ಮತ್ತು ‘ಗೋಲ್ಡನ್​ ಸ್ಟಾರ್’ ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಸಖತ್​’ ಸಿನಿಮಾದಲ್ಲಿ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್​ ನಟಿಸಿದ್ದಾರೆ. ಅಂಧನ ಪಾತ್ರದಲ್ಲಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ‘ಚಮಕ್​’ ಬಳಿಕ ಎರಡನೇ ಬಾರಿಗೆ ಗಣೇಶ್​ ಮತ್ತು ಸುನಿ ಜತೆಯಾಗಿ ಕೆಲಸ ಮಾಡಿದ್ದಾರೆ. ಹಾಡುಗಳ ಮೂಲಕ ಜೂಡಾ ಸ್ಯಾಂಡಿ ಗಮನ ಸೆಳೆದಿದ್ದಾರೆ.

ಸಲ್ಲು ಭರ್ಜರಿ ಫೈಟಿಂಗ್​

‘ಅಂತಿಮ್​: ದಿ ಫೈನಲ್​ ಟ್ರುತ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸಿದ್ದಾರೆ. ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿವೆ. ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್​ ದೃಶ್ಯಗಳಿವೆ ಎಂಬುದಕ್ಕೆ ಟ್ರೇಲರ್​ ಮೂಲಕವೇ ಸಾಕ್ಷಿ ಸಿಕ್ಕಿತ್ತು. ಆ ಕಾರಣದಿಂದಲೂ ‘ಅಂತಿಮ್​: ದಿ ಫೈನಲ್​ ಟ್ರುತ್​’ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ.

‘ಸತ್ಯಮೇವ ಜಯತೆ 2’ ತೆರೆಗೆ

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬಂದಿದೆ. ಈ ಚಿತ್ರ ನವೆಂಬರ್​ 25ರಂದು ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಜಾನ್​ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿಸಿತ್ತು. ಸಲ್ಮಾನ್​ ಖಾನ್​ ಸಿನಿಮಾ ಎದುರು ಸ್ಪರ್ಧಿಗೆ ಇಳಿದಿರುವ ಈ ಚಿತ್ರ ಅಂತಿಮವಾಗಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಮೂಡಿದೆ.

ಇದನ್ನೂ ಓದಿ:

‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್​ ಅಭಿಮಾನದ ಮಾತು

‘ಸಖತ್’​ ವೇದಿಕೆಯಲ್ಲಿ ಗಣೇಶ್​ ಕೋರಿಕೆ ಮೇರೆಗೆ ‘ಎಕ್ಸ್​ಕ್ಯೂಸ್​ಮೀ’ ಹಾಡು ಹೇಳಿದ ಪ್ರೇಮ್

TV9 Kannada

Leave a comment

Your email address will not be published. Required fields are marked *