ಬಾಗಲಕೋಟೆ: ನಗರದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ಬೆಳ್ಳಂಬೆಳಗ್ಗೆ ಆರಂಭವಾಗಿದೆ. ಹಳೆ ಅಂಜುಮನ್ ಏರಿಯಾ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಇಂದು ಬೆಳಗ್ಗೆ ಕೆಲವು ಮನೆಗಳ ಮುಂದಿನ ಅತಿಕ್ರಮಣದ ಜಾಗ, ಶೆಡ್​​​ಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯಿತು. ಈ ವೇಳೆ ಕೋವಿಡ್​ ಸಂದರ್ಭದಲ್ಲಿ ಇಂತಹ ತೆರೆವು ಕಾರ್ಯಾಚರಣೆ ಏಕೆ..? ಮುಂದೆ ಮಳೆಗಾಲ‌ ಆರಂಭವಾಗುತ್ತಿದೆ, ಎಲ್ಲಿ ಹೋಗೋಣ ಎಂದು ಅಧಿಕಾರಿಗಳ ಎದುರು ಶೆಡ್​​​ನಲ್ಲಿ ವಾಸಿಸುವ ಸ್ಥಳೀಯರು ಕಣ್ಣೀರಿಟ್ಟರು. ಅಲ್ಲದೇ ಸಮಯಾವಕಾಶ ನೀಡುವಂತೆ ಗೋಗರೆಯುತ್ತಿದ್ದ ದೃಶ್ಯಗಳು ಕಂಡ ಬಂತು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ನಗರಸಭೆ ಪೌರಾಯುಕ್ತ ಮುನಿಸ್ವಾಮಿ ಹಾಗೂ ಬಿಟಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.

The post ಬಾಗಲಕೋಟೆಯಲ್ಲಿ ಅಕ್ರಮ ಕಟ್ಟಡಗಳ ತೆರವು – ಕಣ್ಣೀರಿಟ್ಟು ಅಧಿಕಾರಿಗಳನ್ನ ಗೋಗರೆದ ಸ್ಥಳೀಯರು appeared first on News First Kannada.

Source: newsfirstlive.com

Source link