ಬಾಗಲಕೋಟೆಯಲ್ಲಿ IT ದಾಳಿ ಅಂತ್ಯ; ತುಮಕೂರಲ್ಲಿ ಮುಂದುವರಿದ ಶೋಧಕಾರ್ಯ

ಬಾಗಲಕೋಟೆ/ ತುಮಕೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಕೂಡ ಹಲವು ಭಾಗಗಳಲ್ಲಿ ದಾಳಿಯನ್ನ ಮುಂದುವರಿಸಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಇಂದು ಕೂಡ ದಾಳಿ ಕಂಟಿನ್ಯೂ ಆಗಿದೆ.

ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿ ಬಳಿಯ ಸತ್ಯನಾರಾಯಣ ಕನ್ಸ್​​ಟ್ರಕ್ಷನ್ ಪ್ರೈ.ಲಿ. ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್​ಎನ್​ಸಿ ಕಂಪನಿಯ ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಎಸ್​ಎನ್​ಸಿ ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನ ನಡೆಸುತ್ತಿದೆ. ಅದರಂತೆ ಎತ್ತಿನಹೊಳೆಗೆ ಟೆಂಟರ್ ವಿಚಾರಕ್ಕೆ ಸಂಬಂಧಿಸಿದ ಕಡತಗಳನ್ನ 8 ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ.

ಇನ್ನು ಬಾಗಲಕೋಟೆ‌ಯಲ್ಲಿ ಐಟಿ ದಾಳಿ ಪರಿಶೀಲನೆ ಮುಕ್ತಾಯವಾಗಿದೆ. ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ಕೆಟಗರಿ ಒನ್ ಗುತ್ತಿಗೆದಾರ ಡಿ.ವೈ.ಉಪ್ಪಾರ ಮನೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ಮುಗಿಸಿ ವಾಪಸ್ ಹೋಗಿದ್ದಾರೆ. ಇಲ್ಲಿ ಸತತ ಹದಿನೇಳು ತಾಸುಗಳ ಕಾಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಗುತ್ತಿಗೆದಾರ ಡಿವೈ ಉಪ್ಪಾರ ವಾಸವಿದ್ದ ಬಾಡಿಗೆ ಮನೆಯಲ್ಲಿ ಶೋಧಕಾರ್ಯ ನಡೆಸಲಾಗಿದೆ. ಮೂಲತಃ ವಿಜಯಪುರ ಜಿಲ್ಲೆಯವರಾಗಿರುವ ಡಿ ವೈ ಉಪ್ಪಾರ, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಾರು 500 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನ ಗುತ್ತಿಗೆ ಪಡೆಯುತ್ತಿದ್ದರು. ಇನ್ನು ಇವರ ಮನೆ ಶೋಧ ನಡೆಸಲು ಬೆಂಗಳೂರಿನಿಂದ ಐದು ಅಧಿಕಾರಿಗಳ ತಂಡ ಆಗಮಿಸಿತ್ತು.

News First Live Kannada

Leave a comment

Your email address will not be published. Required fields are marked *