ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ | Melukote yoganarasimha swamy temple gopura damaged officials fail to repair it


ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ

ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ, ಧಾರ್ಮಿಕ ಮೇಲುಕೋಟೆ ಬೆಟ್ಟದ ಯೋಗಾನರಸಿಂಹ ಸ್ವಾಮಿ ಸನ್ನಿಧಿಯ ಗೋಪುರದಲ್ಲಿ ಕಳಶ ಬಾಗಿದೆ. ಇದರಿಂದ ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿರೋದಕ್ಕೆ ಭಕ್ತರಲ್ಲಿ ಆತಂಕ ಮನೆಮಾಡಿದೆ. ಈ ಪುರಾತನ ದೇವಾಲಯದ ರಾಜಗೋಪುರದಲ್ಲಿ ಕಳಸ ಭಿನ್ನವಾಗಿದೆ.

ಕಳಶ ಬಾಗಿರೋದನ್ನ ನೋಡಿ ಭಕ್ತರಲ್ಲಿ ಬೇಸರದೊಂದಿಗೆ, ಆತಂಕವೂ ಮನೆ ಮಾಡಿದೆ. ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯಿದೆ. ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಸ ದರ್ಶನಕ್ಕೂ ಮಹತ್ವ ಇದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿರುವ ನಂಬಿಕೆ. ಶುಭ ಸಂಕೇತದ ಕಳಶ ಬಾಗಿದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದು ಭಕ್ತರ ಆತಂಕವನ್ನು ಹೆಚ್ಚಿಸಿದೆ. ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದರೂ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಮೇಲುಕೋಟೆ ಜನರು ಆಕ್ರೋಶಗೊಂಡಿದ್ದಾರೆ. ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂಬ ಬೇಸರ ಮನೆಮಾಡಿದೆ.

(melukote yoganarasimha swamy temple gopura damaged officials fail to repair it)

TV9 Kannada


Leave a Reply

Your email address will not be published. Required fields are marked *