ಬಾಗಿನ ಅರ್ಪಿಸಲು ಹೋಗಿ, ಕೆರೆಯಲ್ಲಿ ಈಜಾಡಿದ ಶಾಸಕ ಡಾ.ರಂಗನಾಥ್


ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ಹೋದ ಸಂದರ್ಭ ಶಾಸಕ ಡಾ.ರಂಗನಾಥ್ ಕೆರೆಯಲ್ಲಿ ಈಜಾಡಿದ ಘಟನೆ ಕುಣಿಗಲ್​ನಲ್ಲಿ ನಡೆದಿದೆ.

ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ತುಂಬಿದ ಕೆರೆಗೆ ಬಾಗಿನ ಕೊಡಲು ಶಾಸಕರು ಹೋಗಿದ್ದರು. ಈ ವೇಳೆ ಬಾಗಿನ ಅರ್ಪಿಸಿ, ಮಳೆಯಲ್ಲೇ ಸುಮಾರು ಒಂದು ಗಂಟೆಗಳ ಕಾಲ ಶಾಸಕ ಕೆರೆಯಲ್ಲಿ ಈಜಾಡಿ ಎಂಜಾಯ್​ ಮಾಡಿದ್ದಾರೆ. ಶಾಸಕ ರಂಗನಾಥ್​ ಈಜಾಟದ ಉತ್ಸಾಹ ಕಂಡು ಸ್ಥಳೀಯರೂ ಕೂಡ ಕೆರೆಗಿಳಿದು ಈಜಿ ಸಂಭ್ರಮಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆರಾಯ ಆಗಾಗ ಅಬ್ಬರಿಸಿ ಬೊಬ್ಬಿಯುತ್ತಿದ್ದಾನೆ. ಇದರ ಪರಿಣಾಮ ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಿದೆ.

News First Live Kannada


Leave a Reply

Your email address will not be published. Required fields are marked *