ಬಾಲಿವುಡ್ನ ಖ್ಯಾತ ನಟಿ, ನಿರ್ಮಾಪಕಿ ಮತ್ತು ಪಂಜಾಬ್ ಕಿಂಗ್ಸ್ ಎಲವೆನ್ನ ಒಡತಿ ಪ್ರೀತಿ ಜಿಂಟಾ ಇದೀಗ ತಮ್ಮ ಫ್ಯಾನ್ಸ್ ಕುಲಕ್ಕೆ ಸಿಹಿ ಸುದ್ದಿಯೊಂದನ್ನ ನೀಡಿದ್ದು ನಾವೀಗ ಎರಡು ಮಕ್ಕಳ ತಾಯಾಗಿದ್ದೇನೆ ಎಂದಿದ್ದಾರೆ.
ಹೌದು ಪ್ರೀತಿ ಜಿಂಟಾ ಮತ್ತು ಪತಿ ಗುಡ್ಎನಫ್ ಅವರು ಅವಳಿ ಮಕ್ಕಳನ್ನು ತಮ್ಮ ಪುಟ್ಟ ಪ್ರಪಂಚಕ್ಕೆ ಬರಮಾಡಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಅವರು ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದು ಗಂಡು ಮಗುವಿಗೆ ಜೈ ಜಿಂಟಾ ಗುಡ್ಎನಫ್, ಮತ್ತು ಹೆಣ್ಣು ಮಗುವಿಗೆ ಗಿಯಾ ಜಿಂಟಾ ಗುಡ್ಎನಫ್ ಎಂದು ನಾಮಕರಣ ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ‘ನಾವು ನಮ್ಮ ಜೀವನದಲ್ಲಿ ಹೊಸದೊಂದು ಅಧ್ಯಾಯಕ್ಕೆ ಅಣಿಯಾಗುತ್ತಿದ್ದು ನಮ್ಮ ಪ್ರಪಂಚಕ್ಕೆ ನಮ್ಮ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದೇವೆ. ಮತ್ತು ಈ ಬಾಡಿಗೆ ತಾಯ್ತನಕ್ಕೆ ಸಹಕರಿಸಿದ ವೈದ್ಯರು, ನರ್ಸ್, ಸಿಬ್ಬಂದಿಗೆ ನಮ್ಮ ಆದರದ ಧನ್ಯವಾದಗಳು ಎಂದಿದ್ದಾರೆ. ಸದ್ಯ ನಟಿ ಪ್ರೀತಿ ಅವರು ತಮ್ಮ ಪತಿಯೊಂದಿಗೆ ಲಾಸ್ಏಜಂಲಿಸ್ನಲ್ಲಿ ವಾಸವಾಗಿದ್ದಾರೆ. ಇತ್ತಿಚಿಗೆ ಅಲ್ಲಿಯೇ ದೀಪಾವಾಳಿಯನ್ನು ಆಚರಿಸಿದ ಅವರು ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ ದೀಪಾವಳಿಯ ಶುಭಾಶಯ ಕೋರಿದ್ದರು.