ಗಾಂಧಿನಗರ: ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಮಿಸ್ಟರ್ ಇಂಡಿಯಾ ಜಗದೀಶ್ ಲಾಡ್ ಕೊರೊನಾಗೆ ಬಲಿಯಾಗಿದ್ದಾರೆ.

ಜಗದೀಶ್ ಲಾಡ್(34) ನಿನ್ನೆ ಗುಜರಾತ್‍ನ ವಡೋದರದಲ್ಲಿ ಮೃತಪಟ್ಟಿದ್ದಾರೆ. ಜಗದೀಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಜಗದೀಶ್ ಅವರಿಗೆ ಆಕ್ಸಿಜನ್ ಸಪೋರ್ಟ್ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ  ಕೊನೆಯುಸಿರೆಳೆದಿದ್ದಾರೆ. ಜಗದೀಶ್ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ಜಗದೀಶ್ ಲಾಡ್ ಅವರು ಅನೇಕ ದೇಹದಾಢ್ರ್ಯ ಸ್ಪರ್ಧೆಗಳಲ್ಲಿ ಮಹರಾಷ್ಟ್ರ ಮತ್ತು ಭಾರತವನ್ನು ಪ್ರತಿನಿಧಿಸಿದ್ದರು. ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಸೇರಿದಂತೆ ಅವರ ಹೆಸರಿಗೆ ಇನ್ನೂ ಅನೇಕ ಸಾಧನೆಗಳಿವೆ.

ಕೊರೊನಾ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಲವರು ಸಾವು ಬದುಕಿನ ಮಧ್ಯೆ ಹೊರಾಟವನ್ನು ನಡೆಸುತ್ತಿದ್ದಾರೆ. ಮಹಾಮಾರಿ ಕೊರೊನಾಗೆ ಯುವ ಸಮೂಹವೇ ಹೆಚ್ಚು ಮೃತ್ಯು ಕೂಪಕ್ಕೆ  ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

The post ಬಾಡಿ ಬಿಲ್ಡರ್ ಜಗದೀಶ್ ಲಾಡ್ ಕೊರೊನಾಗೆ ಬಲಿ appeared first on Public TV.

Source: publictv.in

Source link